ನಮೋ ಟಿವಿಯಲ್ಲಿ ರಾಜಕೀಯ ಅಂಶಗಳ ಪ್ರಸಾರಕ್ಕೂ ನಿರ್ಬಂಧ ಹೇರಿದ ಚುನಾವಣಾ ಆಯೋಗ!

ಪ್ರಧಾನಿ ನರೇಂದ್ರ ಮೋದಿ ಬೆಂಬಲಿತ ನಮೋ ಟಿವಿಗೆ ಚುನಾವಣಾ ಆಯೋಗ ಮತ್ತೊಂದು ಶಾಕ್ ನೀಡಿದ್ದು, ಈ ಹಿಂದೆ ಪಿಎಂ ನರೇಂದ್ರ ಮೋದಿ ಚಿತ್ರ ಪ್ರಸಾರಕ್ಕೆ ತಡೆ ನೀಡಿದ್ದ ಆಯೋಗ ಇದೀಗ ನಮೋ ಟಿವಿಯಲ್ಲಿ ರಾಜಕೀಯ ಕುರಿತ ಅಂಶಗಳ ಪ್ರಸಾರಕ್ಕೂ ನಿರ್ಬಂಧ ಹೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬೆಂಬಲಿತ ನಮೋ ಟಿವಿಗೆ ಚುನಾವಣಾ ಆಯೋಗ ಮತ್ತೊಂದು ಶಾಕ್ ನೀಡಿದ್ದು, ಈ ಹಿಂದೆ ಪಿಎಂ ನರೇಂದ್ರ ಮೋದಿ ಚಿತ್ರ ಪ್ರಸಾರಕ್ಕೆ ತಡೆ ನೀಡಿದ್ದ ಆಯೋಗ ಇದೀಗ ನಮೋ ಟಿವಿಯಲ್ಲಿ ರಾಜಕೀಯ ಕುರಿತ ಅಂಶಗಳ ಪ್ರಸಾರಕ್ಕೂ ನಿರ್ಬಂಧ ಹೇರಿದೆ.
ಹೌದು ಈ ಕುರಿತು ದೆಹಲಿಯ ಚುನಾವಣಾಧಿಕಾರಿಗೆ ಚುನಾವಣಾ ಆಯೋಗ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ನಮೋ ಟಿವಿಯಲ್ಲಿ ಪ್ರಸಾರವಾಗುವ ಎಲ್ಲ ಮಾಹಿತಿಗಳನ್ನು ಪರೀಶಿಲಿಸುವಂತೆ ಸೂಚನೆ ನೀಡಿದೆ. ಅಂತೆಯೇ ಪರಿಶೀಲನೆ ನಡೆಸದ ಹೊರತು ಯಾವುದೇ ಮಾಹಿತಿ ಅಥವಾ ಸುದ್ದಿ ಪ್ರಸಾರ ಮಾಡದಂತೆ ನಿರ್ದೇಶನ ನೀಡುವಂತೆಯೇ ಸೂಚನೆ ನೀಡಿದೆ. ನಮೋ ಟಿವಿಯಲ್ಲಿನ ಎಲ್ಲ ಕಂಟೆಂಟ್ ಗಳನ್ನು MCMC ಸಮಿತಿ ಪರಿಶೀಲನೆ ನಡೆಸಿ, ಅಗತ್ಯವಾದ ಪ್ರಮಾಣೀಕರಣ ನೀಡಬೇಕು. ಒಂದು ವೇಳೆ ಪ್ರಮಾಣೀಕರಿಸದ ಅಂಶಗಳು ಪ್ರಸಾರವಾದರೆ ಅಥವಾ ಪ್ರಸಾರವಾಗುವ ಮುನ್ನವೇ ಕೂಡಲೇ ಅದನ್ನು ತೆಗೆದು ಹಾಕಬೇಕು ಎಂದು ನಿರ್ದೇಶನ ನೀಡಿದೆ.
ಇನ್ನು ನಮೋ ಟಿವಿ ಮತ್ತು ಅದರಲ್ಲಿ ಅಂಶಗಳ ಕುರಿತು ಈ ಹಿಂದೆ ಆಮ್ ಆದ್ಮಿ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com