ಲೋಕಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲೇ 'ನಮೋ ಟಿವಿ' 'ನಿಗೂಢ ನಾಪತ್ತೆ'!

ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಷ್ಟೇ ಸುದ್ದಿಗೆ ಗ್ರಾಸವಾಗಿದ್ದ ನಮೋ ಟಿವಿ ಚುನಾವಣೆ ಮುಕ್ತಾಯದ ಬೆನ್ನಲ್ಲೇ ನಿಗೂಢವಾಗಿ ನಾಪತ್ತೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಷ್ಟೇ ಸುದ್ದಿಗೆ ಗ್ರಾಸವಾಗಿದ್ದ ನಮೋ ಟಿವಿ ಚುನಾವಣೆ ಮುಕ್ತಾಯದ ಬೆನ್ನಲ್ಲೇ ನಿಗೂಢವಾಗಿ ನಾಪತ್ತೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಈ ಬಗ್ಗೆ ಸುದ್ದಿಸಂಸ್ಥೆ ವರದಿ ಮಾಡಿದ್ದು, ಕಳೆದ ಭಾನುವಾರ ಮುಕ್ತಾಯಗೊಂಡ 7ನೇ ಹಾಗೂ ಅಂತಿಮ ಹಂತದ ಮತದಾನ ಮುಕ್ತಾಯದ ಬಳಿಕ ನಮೋ ಟಿವಿ ತನ್ನ ಪ್ರಸಾರ ನಿಲ್ಲಿಸಿದ್ದು, ಎಲ್ಲ ರೀತಿಯ ಕೇಬಲ್ ಆಪರೇಟರ್ಸ್ ಮತ್ತು ಸೆಟ್ ಆಪ್ ಬಾಕ್ಸ್, ಮತ್ತು ಡಿಶ್ ಆಧಾರಿತ ಸೇವೆಗಳಿಂದಲೂ ನಮೋ ಟಿವಿ ನಾಪತ್ತೆಯಾಗಿದೆ ಎಂದು ಹೇಳಲಾಗಿದೆ. 
ಬಿಜೆಪಿ ಮಾಲೀಕತ್ವದ ನಮೋ ಟಿವಿ ಹಾಲಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಮೋದಿ ಪರ ಮತ್ತು ಬಿಜೆಪಿ ಪರ ಪ್ರಚಾರ ನಡೆಸಿ ಕೇಂದ್ರ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದ ನಮೋ ಟಿವಿಗೆ ಚುನಾವಣಾ ಆಯೋಗ ನಿರ್ಬಂಧ ಹೇರಿತ್ತು. ನಮೋ ಟಿವಿಯಲ್ಲಿ ಕೇವಲ ಪ್ರಧಾನಿ ಮೋದಿ ಸಂದರ್ಶನಗಳು, ಮೋದಿ ರ್ಯಾಲಿಗಳು, ಪ್ರಚಾರದ ಕಾರ್ಯಕ್ರಮಗಳ, ಬಿಜೆಪಿ ಪರ ಯೋಜನೆಗಳನ್ನು ವಿಜೃಂಭಿಸುವ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡಲಾಗುತ್ತಿತ್ತು. ಇದು ಆಯೋಗದ ಕೆಂಗಣ್ಣಿಗೆ ತುತ್ತಾಗಿತ್ತು. ಇದೇ ಕಾರಣಕ್ಕೆ ನಮೋ ಟಿವಿ ಪ್ರಸಾರಕ್ಕೆ ಆಯೋಗ ನಿರ್ಬಂಧ ಹೇರಿತ್ತು.
ಲೋಕಸಭಾ ಚುನಾವಣೆ ಆರಂಭಕ್ಕೂ ಮೊದಲು ಅಂದರೆ ಮಾರ್ಚ್ ನಲ್ಲಿ ಆರಂಭವಾಗಿದ್ದ ನಮೋ ಟಿವಿ ಉಚಿತ ಸೇವೆ ನೀಡುತ್ತಿತ್ತು. ಅಂದರೆ ಈ ನಮೋ ಟಿವಿಗೆ ವೀಕ್ಷಕರು ಯಾವುದೇ ರೀತಿಯ ಶುಲ್ಕ ನೀಡುವಂತಿರಲಿಲ್ಲ. ಅಲ್ಲದೆ ನಮೋ ಮೊಬೈಲ್ ಆ್ಯಪ್ ಮೂಲಕವು ನಮೋ ಟಿವಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ವಿಪಕ್ಷಗಳು ಹಾಗೂ ತಜ್ಞರು ನಮೋ ಟಿವಿಯ ಅಧಿಕೃತತೆಯನ್ನುಪ್ರಶ್ನಿಸಿದಾಗ ಸಾಕಷ್ಟು ವಿವಾದ ಉಂಟಾಗಿತ್ತು, ಈ ಬಗ್ಗೆ ಸ್ವತಃ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸ್ಪಷ್ಟನೆ ನೀಡಿ ನಮೋ ಟಿವಿ ನೋಂದಾಯಿತ ವಾಹಿನಿ ಅಲ್ಲ ಎಂದು ಸ್ಪಷ್ಟನೆ ನೀಡಿತ್ತು. ವಾಹಿನಿ ಪ್ರಸಾರಕ್ಕೆ ಅನುಮತಿ ಅತ್ಯಗತ್ಯ ಎಂದೂ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com