ಮತದಾನದ ದಿನ ಕರ್ತವ್ಯ ಮರೆತು ಪ್ರವಾಸಕ್ಕೆ ತೆರಳಿದರೇ ಜೋಕೆ...!

ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ನಾನಾ ರೀತಿಯ ಕಸರತ್ತು ನಡೆಸುತ್ತಿದ್ದು, ಇದಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ಕೂಡ ಕೈ ಜೋಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶಿವಮೊಗ್ಗ: ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ನಾನಾ ರೀತಿಯ ಕಸರತ್ತು ನಡೆಸುತ್ತಿದ್ದು, ಇದಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ಕೂಡ ಕೈ ಜೋಡಿಸಿದ್ದಾರೆ.
ಹೌದು..ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ನಾನಾ ರೀತಿಯ ಹರಸಾಹಸ ಪಡುತ್ತಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಮತದಾನದ ಪ್ರಮಾಣ ಏರಿಕೆಯಾಗಿಲ್ಲ. ಮತದಾನಕ್ಕಾಗಿ ಸರ್ಕಾರ ರಜೆ ನೀಡಿದರೆ ಹಲವರು ಮತದಾನ ಮಾಡದೇ ಪ್ರವಾಸಕ್ಕೆ ತೆರಳಿ ಮಜಾ ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ಕರ್ತವ್ಯ ಮರೆಯುತ್ತಿದ್ದಾರೆ. ಹೀಗಾಗಿ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಅಂದು ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಯಾವುದೇ ಹೊಟೆಲ್ ನಲ್ಲೂ ಕೊಠಡಿ ನೀಡದಂತೆ ಹೊಟೆಲ್ ಮತ್ತು ಲಾಡ್ಜ್ ಗಳಿಗೆ ಸೂಚನೆ ನೀಡಿದ್ದಾರೆ.
'ಏಪ್ರಿಲ್ 18 ಹಾಗೂ 23ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ದಿನ ಸಾರ್ವತ್ರಿಕ ರಜೆ ಘೋಷಣೆ ಇರುವುದರಿಂದ ಅನೇಕರು ಮತದಾನ ಮಾಡದೆ ಪ್ರವಾಸ ತೆರಳುತ್ತಾರೆ. ಹೀಗಾದರೆ, ಶೇಕಡಾವಾರು ಮತದಾನ ಕಡಿಮೆಯಾಗಲಿದೆ. ಕೊಠಡಿ ಕಾಯ್ದಿರಿಸಲು ಬರುವ ಪ್ರವಾಸಿಗರ ವೋಟಿಂಗ್​ ಕಾರ್ಡ್​ ಹಾಗೂ ಅವರ ಹಾಗೂ ವಿಳಾಸ ಪರಿಶೀಲಿಸಿ ಎಂದು ಶಿವಮೊಗ್ಗ ಡಿಸಿ ಆದೇಶ ಹೊರಡಿಸಿದ್ದಾರೆ. ಪ್ರಜಾಪ್ರಭುತ್ವದ ಹಬ್ಬದಂದು ಚುನಾವಣೆಗೆ ಭಾಗವಹಿಸಲು ಅವಕಾಶ ಮಾಡಿ ಕೊಡಿ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಡಿಸಿ ಕೋರಿದ್ದಾರೆ. ಈ ಬಗ್ಗೆ ಹೋಟೆಲ್​, ರೆಸಾರ್ಟ್​ ಅವರಿಗೆ ಸೂಚಿಸಿ ಎಂದು ಜಿಲ್ಲಾ ಕಾರ್ಮಿಕರ ಅಧಿಕಾರಿಗೆ ಆದೇಶಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com