ನಾಳೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ‘ವಿಜಯ ಸಂಕಲ್ಪ’ ಸಮಾವೇಶ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಗರದ ಅರಮನೆ ಮೈದಾನದಲ್ಲಿ ‘ವಿಜಯ ಸಂಕಲ್ಪ’ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು....
ಪೂರ್ವ ಸಿದ್ಧತೆ ಪರಿಶೀಲಿಸುತ್ತಿರುವ ಬಿಜೆಪಿ ನಾಯಕರು
ಪೂರ್ವ ಸಿದ್ಧತೆ ಪರಿಶೀಲಿಸುತ್ತಿರುವ ಬಿಜೆಪಿ ನಾಯಕರು
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಗರದ ಅರಮನೆ ಮೈದಾನದಲ್ಲಿ ‘ವಿಜಯ ಸಂಕಲ್ಪ’ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು, ಸಮಾವೇಶದ ಪೂರ್ವ ಸಿದ್ಧತೆಗಳನ್ನು ಬಿಜೆಪಿ ಮುಖಂಡರು ಶುಕ್ರವಾರ ಪರಿಶೀಲಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ ರಾವ್‍, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್‍, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ. ಅರವಿಂದ ಲಿಂಬಾವಳಿ, ರಾಜ್ಯಸಭಾ ಸದಸ್ಯ ರಾಜೀವ್‍ ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯರಾದ ಲೆಹರ್ ಸಿಂಗ್, ಬಿಜೆಪಿ ಬೆಂಗಳೂರು ನಗರ ಅಧ್ಯಕ್ಷ ಎಸ್‍.ಮುನಿರಾಜು ಮತ್ತಿತರ ಮುಖಂಡರು ಅರಮನೆ ಮೈದಾನದಲ್ಲಿ ಸಿದ್ದತೆಗಳನ್ನು ಪರಿಶೀಲಿಸಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಅಶೋಕ್‍, ಪ್ರಧಾನಮಂತ್ರಿ ಅವರ ಸಾರ್ವಜನಿಕ ಸಭೆ ಅಭೂತಪೂರ್ವ ಯಶಸ್ವಿಯಾಗಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಅರಮನೆ ಮೈದಾನ ಬಿಜೆಪಿಗೆ ಅದೃಷ್ಟದ ಮೈದಾನವೆನಿಸಿದೆ. 2014ರ ಚುನಾವಣೆಯಲ್ಲಿ ಇದೇ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಮಾಡಿದ್ದರು. ಸಾರ್ವಜನಿಕ ಸಭೆ ಭಾರಿ ಯಶಸ್ವಿಯಾಗಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಿ ನರೇಂದ್ರಮೋದಿ ಅವರು ಪ್ರಧಾನಿಯಾದರು. ಕಳೆದ ಬಾರಿಗಿಂತ ಈ ಬಾರಿ ಬೃಹತ್‍ ಸಾರ್ವಜನಿಕ ಸಭೆ ಅಭೂತಪೂರ್ವ ಯಶಸ್ವಿಯಾಗಿ ಬಿಜೆಪಿ ವಿಜಯದ ಪತಾಕೆ ಹಾರಿಸಲಿದೆ ಎಂದರು.
1.5 ಲಕ್ಷ ಮಂದಿ ಸೇರುವ ನಿರೀಕ್ಷೆ: 
ನಾಳೆ ಸಂಜೆ 4.30ಕ್ಕೆ ಆರಂಭವಾಗುವ ‘ವಿಜಯಸಂಕಲ್ಪ’ ಯಾತ್ರೆಗೆ ಒಂದೂವರೆ ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ವೇದಿಕೆಯನ್ನು ಅಚ್ಚಕಟ್ಟಾಗಿ, ಸುಂದರವಾಗಿ ಸಜ್ಜುಗೊಳಿಸಲಾಗಿದೆ. 8 ಮೀಟರ್ ಎತ್ತರದ ವೇದಿಕೆಯಲ್ಲಿ ಬೃಹತ್‍ ಎಲ್‍ಇಡಿ ಪರದೆಯನ್ನು ಅಳವಡಿಸಲಾಗಿದೆ. ಹಾಗೆಯೇ ಸಭಿಕರ ಅನುಕೂಲಕ್ಕಾಗಿ ಮೈದಾನದಲ್ಲಿ 11 ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಆಸನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಆನ್‍ಲೈನ್‍ ಮೂಲಕ 6,000 ಮಂದಿ ನೋಂದಣಿ:
ನಾಳಿನ ಸಮಾವೇಶದಲ್ಲಿ ಪಾಲ್ಗೊಳ್ಳಲು ಆನ್‍ಲೈನ್‍ ಮೂಲಕ 6,000 ಮಂದಿ ನೋಂದಣಿ ಮಾಡಿದ್ದಾರೆ. ಸಾರ್ವಜನಿಕ ಸಭೆಗೆ ಎಲ್ಲರಿಗೂ ಆಹ್ವಾನವಿದೆ. ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳ ಒಂದೂವರೆ ಲಕ್ಷ ಮಂದಿ ಸಭೆಗೆ ಸಾಕ್ಷಿಯಾಗಲಿದ್ದಾರೆ ಎಂದು ಅಶೋಕ್‍  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com