ಕಾರಿನ ಸ್ಟೆಪ್ನಿ ಟಯರ್‌ನಲ್ಲಿ ಸಿಕ್ಕ 2.30 ಕೋಟಿ ಹಣ ನನ್ನದೇ: ಮಾಜಿ ಶಾಸಕ ಅಪ್ಪಾಜಿಗೌಡ

ಐಟಿ ದಾಳಿ ವೇಳೆ ಕಾರಿನ ಸ್ಟೆಪ್ನಿ ಟಯರ್‌ನಲ್ಲಿ ಸಿಕ್ಕ 2.30 ಕೋಟಿ ರುಪಾಯಿ ಹಣ ನನ್ನದೇ ಎಂದು ಮಾಜಿ ಶಾಸಕ, ಜೆಡಿಎಸ್ ಮಾಜಿ ಮುಖಂಡ ಅಪ್ಪಾಜಿಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.

Published: 23rd April 2019 12:00 PM  |   Last Updated: 23rd April 2019 07:37 AM   |  A+A-


Appaji Gowda

ಅಪ್ಪಾಜಿ ಗೌಡ

Posted By : VS VS
Source : Online Desk
ಬೆಂಗಳೂರು: ಐಟಿ ದಾಳಿ ವೇಳೆ ಕಾರಿನ ಸ್ಟೆಪ್ನಿ ಟಯರ್‌ನಲ್ಲಿ ಸಿಕ್ಕ 2.30 ಕೋಟಿ ರುಪಾಯಿ ಹಣ ನನ್ನದೇ ಎಂದು ಮಾಜಿ ಶಾಸಕ, ಜೆಡಿಎಸ್ ಮಾಜಿ ಮುಖಂಡ ಅಪ್ಪಾಜಿಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.

ಅದರಲ್ಲಿ ಸಿಕ್ಕ ಹಣ ನನ್ನದೆ. ಇದರಲ್ಲಿ ಯಾವುದೇ ಮುಚ್ಚು ಮರೆಯಿಲ್ಲ. ಅದು ಅಕ್ರಮ ಎನ್ನುವುದಾದರೆ ಅದನ್ನು ಮುಚ್ಚಿ ಹಾಕಬಹುದಿತ್ತು. ಹಾಗೇಕೆ ಮಾಡಲಿ, ಅದರ ಅವಶ್ಯಕತೆ ನನಗಿಲ್ಲ. ಜಮೀನು ಮಾರಿದ್ರಿಂದ ಬಂದ ಹಣವಿದು. ಈ ಬಗ್ಗೆ ಐಟಿ ಅಧಿಕಾರಿಗಳಿಗೆ ಸೂಕ್ತ ದಾಖಲೆ ಸಲ್ಲಿಸುತ್ತೇನೆ ಎಂದು ಹೇಳಿದರು. 

ಕಳೆದ ಶನಿವಾರ ಐಟಿ ಅಧಿಕಾರಿಗಳು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕಾರನ್ನು ವಶಕ್ಕೆ ಪಡೆದು ಪರಿಶೋಧ ನಡೆಸಿದಾಗ ಕಾರಿನ ಸ್ಟೆಪ್ನಿ ಟಯರ್‌ನಲ್ಲಿ 2.30 ಕೋಟಿ ಹಣ ಪತ್ತೆಯಾಗಿತ್ತು. ಭಾನುವಾರ ಐಟಿಯು ಮಾಜಿ ಶಾಸಕ ಅಪ್ಪಾಜಿಗೌಡ ವಿಚಾರಣೆ ನಡೆಸಿದಾಗ ಅಪ್ಪಾಜಿಗೌಡ ಪತ್ತೆಯಾದ ಹಣ ತನ್ನದೇ ಎಂದು ಒಪ್ಪಿಕೊಂಡಿದ್ದರು. 

ಇದೀಗ ಐಟಿ ನೋಟಿಸ್ ನೀಡಿದೆ. ಅದಕ್ಕೆ ವಿವರಣೆ ನೀಡಲು ಕಾಲಾವಕಾಶ ಕೇಳಿದ್ದೇನೆ. ಮುಂದಿನ ವಿಚಾರಣೆ ವೇಳೆ ನಾನು ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp