
ಬೆಂಗಳೂರು: ರೆಡ್ ವೈನ್, ವೈಟ್ ವೈನ್, ಕಡಿಮೆ ಹಾಗೂ ಹೆಚ್ಚು ಆಲ್ಕೋಹಾಲಿಕ್(ಮದ್ಯಸಾರ) ಮಿಶ್ರಣ ಇರುವ ವೈನ್... ಹೀಗೆ ಹತ್ತಾರು ದೇಶದ 150ಕ್ಕೂ ಹೆಚ್ಚು ಬ್ರಾಂಡ್‌ನ ವೈನ್‌ಗಳು ಇಲ್ಲಿ ಲಭ್ಯ.
ವೈನ್ ಪ್ರಿಯರಿಗಾಗಿ ಕರ್ನಾಟಕ ದ್ರಾಕ್ಷಾ ರಸ ಮಂಡಳಿ ಒರಾಯನ್ ಮಾಲ್‌ನಲ್ಲಿ ಮೂರು ದಿನಗಳ ಕಾಲ ವೈನ್‌ಫೆಸ್ಟ್ ಏರ್ಪಡಿಸಿದೆ. ರಾಜ್ಯದ 9 ವೈನರಿಗಳು, ಮಹಾ ರಾಷ್ಟ್ರ, ಕ್ಯಾಲಿಫೋರ್ನಿಯಾ, ಫ್ರಾನ್ಸ್, ಇಟಲಿ, ಸ್ಪೇನ್, ನ್ಯೂಜಿಲೆಂಡ್ ಸೇರಿದಂತೆ ನಾನಾ ದೇಶಗಳ ವೈನ್‌ಗಳು ಇಲ್ಲಿ ಲಭ್ಯವಿದ್ದು, ರು. 100 ರಿಂದ 46 ಸಾವಿರದವರೆಗೆ ವೈನ್ ಬಾಟಲಿಗಳು ಸಿಗಲಿವೆ.
ಶುಕ್ರವಾರ ಆರಂಭವಾದ ಈ ಮೇಳಕ್ಕೆ ಶಾಸಕ ಅಶ್ವತ್ಥ್ ನಾರಾಯಣ ಚಾಲನೆ ನೀಡಿದರು. ಜ. 25ಕ್ಕೆ ಮುಕ್ತಾಯವಾಗಲಿದೆ. ಚಾಲನೆ ನೀಡಿ ನಂತರ ಮಾತನಾಡಿದ ಅವರು, ವೈನ್ ರಫ್ತಿನಿಂದ ಸುಮಾರು ರು. 160 ಕೋಟಿ ಲಾಭವಾಗಿದೆ. ಈ ಹಿನ್ನೆಲೆಯಲ್ಲಿ ದ್ರಾಕ್ಷಿ ಬೆಳೆಯುವ ರಾಜ್ಯದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ ರೈತರಿಗೆ ರು. 50 ಲಕ್ಷ ಸಹಾಯಧನ ನೀಡಲಾಗುವುದು, ಇದರಿಂದ ದ್ರಾಕ್ಷಿ ಬೆಳೆ ಮತ್ತಷ್ಟು ಹೆಚ್ಚಲಿದೆ ಎಂದರು.
ಇದರಿಂದ ದ್ರಾಕ್ಷಿ ಬೆಲೆ ಮತ್ತಷ್ಟು ಹೆಚ್ಚಲಿದೆ ಎಂದರು. ಆರೋಗ್ಯಕರ ವೈನ್ ಬಳಕೆಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ದ್ರಾಕ್ಷಿ ಬೆಳೆಯುವ ಹಾಗೂ ವೈನ್ ತಯಾರಿಕೆ ಬಗ್ಗೆ ತರಬೇತಿ, ತಯಾರಕರು ಮತ್ತು ಸಾರ್ವಜನಿಕರ ನಡುವೆ ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸುವ ಮೇಳೆ ಇದಾಗಿದೆ.
Advertisement