ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಫ್ರಾನ್ಸ್ ತಂಡದ ಆಟಗಾರ ಅದಿಲ್ ರ‍್ಯಾಮಿ ನಿವೃತ್ತಿ

ಫೀಫಾ ವಿಶ್ವಕಪ್ 2018ರ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ ವಿಶ್ವ ವಿಜೇತ ಫ್ರಾನ್ಸ್ ತಂಡ ಪ್ರಮುಖ ಆಟಗಾರ ಅದಿಲ್ ರ್ಯಾಮಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಪ್ರಕಟಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಾಸ್ಕೋ: ಫೀಫಾ ವಿಶ್ವಕಪ್ 2018ರ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ ವಿಶ್ವ ವಿಜೇತ ಫ್ರಾನ್ಸ್ ತಂಡ ಪ್ರಮುಖ ಆಟಗಾರ ಅದಿಲ್ ರ್ಯಾಮಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಪ್ರಕಟಿಸಿದ್ದಾರೆ.
ನಿನ್ನೆ ಮಾಸ್ಕೋದ ಲುಜ್‌ನಿಕಿ ಅಂಗಣದಲ್ಲಿ ನಡೆದ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾ ವಿರುದ್ಧ 4-2 ಅಂತರದಲ್ಲಿ ಮಣಿಸಿ ಮತ್ತೆ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದೆ. ಇಡೀ ಫ್ರಾನ್ಸ್ ದೇಶದ ಅಭಿಮಾನಿಗಳು ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ತೇಲಾಡುತ್ತಿರುವಂತೆಯೇ ಆ ತಂಡದ ಪ್ರಮುಖ ಆಟಗಾರ ಅದಿಲ್ ರ್ಯಾಮಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅದಿಲ್ ರ್ಯಾಮಿ, ಇದು ತತ್ ಕ್ಷಣದ ನಿರ್ಧಾರವಲ್ಲ. ವಿಶ್ವಕಪ್ ಗೂ ಮೊದಲೇ ನಾನು ನಿವೃತ್ತಿ ಘೋಷಿಸಬೇಕು ಎಂದಿದ್ದೆ. ಆದರೆ ಕೊನೆಯ ವಿಶ್ವಕಪ್ ಟೂರ್ನಿಯನ್ನು ಆಡಿ ಖುಷಿಯಿಂದ ವಿದಾಯ ಹೇಳಬೇಕು ಎಂದು ವಿಶ್ವಕಪ್ ಟೂರ್ನಿ ಬಳಿಕ ವಿದಾಯ ಹೇಳಲು ನಿರ್ಧರಿಸಿದೆ. ಇದೀಗ ನಾವು ವಿಶ್ವಕಪ್ ಜಯಿಸಿದ್ದು, ತುಂಬಾ ಸಂತೋಷದಿಂದಲೇ ನಾನು ವಿದಾಯ ಹೇಳುತ್ತಿದ್ದೇನೆ ಎಂದು ಅದಿಲ್ ರ್ಯಾಮಿ ಹೇಳಿದ್ದಾರೆ.
ಇನ್ನು 2010ರಲ್ಲಿ ಅದಿಲ್ ರ್ಯಾಮಿ ಫ್ರಾನ್ಸ್ ತಂಡವನ್ನು ಮೊದಲ ಬಾರಿಗೆ ಪ್ರತಿನಿಧಿಸಿದ್ದರು. ಅದಿಲ್ ರ್ಯಾಮಿ ಈ ವರೆಗೂ 35  ಬಾರಿ ಫ್ರಾನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com