ಫಿಫಾ ವಿಶ್ವ ಕಪ್ ಪಂದ್ಯಗಳನ್ನು ನೋಡಲು 4 ಸಾವಿರ ಕಿಮೀ ಸೈಕಲ್ ತುಳಿದ ಕೇರಳದ ಶಿಕ್ಷಕ!

ಫುಟ್ಬಾಲ್ ಅಭಿಮಾನಿಯೊಬ್ಬ ರಷ್ಯಾದಲ್ಲಿ ಫಿಫಾ ಪಂದ್ಯ ನೊಡಲು ಸೈಕಲ್​ನಲ್ಲೇ ಬರೋಬ್ಬರಿ 4 ಸಾವಿರ ಕಿಲೋ ಮೀಟರ್ ಪ್ರಯಾಣಿಸಿದ್ದಾನೆ....
ಕ್ಲಿಫಿನ್ ಫ್ರಾನ್ಸಿಸ್
ಕ್ಲಿಫಿನ್ ಫ್ರಾನ್ಸಿಸ್
ಕೇರಳ: ಫುಟ್ಬಾಲ್ ಅಭಿಮಾನಿಯೊಬ್ಬ ರಷ್ಯಾದಲ್ಲಿ ಫಿಫಾ ವಿಶ್ವ ಕಪ್ ಪಂದ್ಯಗಳನ್ನು ನೊಡಲು ಸೈಕಲ್​ನಲ್ಲೇ ಬರೋಬ್ಬರಿ 4 ಸಾವಿರ ಕಿಲೋ ಮೀಟರ್ ಪ್ರಯಾಣಿಸಿದ್ದಾನೆ.
28 ವರ್ಷದ ಕೇರಳದ ಕ್ಲಿಫಿನ್ ಫ್ರಾನ್ಸಿಸ್ ಫೆಬ್ರವರಿ 23 ರಂದು ಕೆರಳದಿಂದ ತೆರಳಿದ್ದಾರೆ, ಸದ್ಯ ರಷ್ಯಾ ತಲುಪಿರುವ ಪ್ರಾನ್ಸಿಸ್ ನಾನು ತುಂಬಾ ಸಂತೋಷವಾಗಿದ್ದೇನೆ, ಇದು 4 ತಿಂಗಳ ಸುದೀರ್ಘ ಪ್ರಯಾಣವಾಗಿತ್ತು, ಎಂದು ಹೇಳಿದ್ದಾರೆ. ಜೂನ್ 26ರಂದು ಫ್ರಾನ್ಸ್ ಮತ್ತು ಡೆನ್ಮಾರ್ಕ್ ತಂಡಗಳ ನಡುವಿನ ಪಂದ್ಯವನ್ನು ನೋಡಲು ಪ್ರಾನ್ಸಿಸ್ ಟಿಕೆಟ್ ಖರೀದಿಸಿದ್ದಾರೆ,
ಪ್ರತಿದಿನ ನೀವು ಹೊಸಹೊಸ ಜನ ನೋಡಬಹುದು, ಹೊಸ ಭೂಮಿ, ಹೊಸ ಸಂಸ್ಕೃತಿ, ಈ ಸುದೀರ್ಘ ಪ್ರಯಾಣದ ವೇಳೆ ನನಗೆ ಒಳ್ಳೆಯ ಮತ್ತು ಕೆಟ್ಟ ಅನುಭವಗಳಾಗಿವೆ ಎಂದಗು ಹೇಳಿದ್ದಾರೆ, ಪ್ರಾನ್ಸಿಸ್ ಬಳಿ ಎಲ್ಲಾ ದಾಖಲೆಗಳಿದ್ದಾಗ್ಯೂ ಅಜೆರ್ ಬೈಜಾನ್ ನಲ್ಲಿ ಪ್ರವೇಶ ನಿರಾಕರಿಸಲಾಯಿತು. ನಂತರ  ಮಾರ್ಗ ಬದಲಿಸಿಕೊಂಡೆ. ಜರ್ಮನಿಯಲ್ಲಿ ಪ್ರವೇಶ ನೀಡದಿದ್ದಕ್ಕೆ ನನಗೆ ತುಂಬಾ ಬೇಸರವಾಯಿತು, ಆದರೆ ಅಲ್ಲಿಯೂ  ನನಗೆ ಒಳ್ಳೆಯ ಅನುಭವವಾಯಿತು, ನಾನು ಹಿಂದೆಂದೂ ಅವರನ್ನು ಭೇಟಿ ಮಾಡಿರಲಿಲ್ಲ, ಆದರೂ ಜನ ನನಗೆ ತಂಗಲು ಅವಕಾಶ ಮಾಡಿಕೊಟ್ಟರು. ಮಲಗಲು ಮನೆ ನೀಡಿ ಊಟ ಕೊಟ್ಟರು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ,
ಬಿ.ಟೆಕ್ ಪದವಿಧರನಾಗಿರುವ ಪ್ರಾನ್ಸಿಸ್ ಕೊಚ್ಚಿಯ ಕಕ್ಕನಾಡ್ ಇನ್ಪೋಪಾರ್ಕ್ ನಲ್ಲಿ ಕೆಲ ಸಮಯ ಕೆಲಸ ಮಾಡಿದ್ದರು. ಅದಕ್ಕೂ ಮುನ್ನ ಶಾಲೆಯಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡಿದ್ದರು ಎಂದು ಅವರ ಚಿಕ್ಕಪ್ಪ ಹೇಳಿದ್ದಾರೆ,
ತಮ್ಮ ಹುಟ್ಟುಹಬ್ಬವನ್ನು ಇರಾನ್ ನ ಮಯ್ ಮೇಹ್ ಜನತೆ ಜೊತೆ ಆಚರಿಸಿಕೊಂಡೆ,ಸ್ಥಳೀಯ ಪಾನೀಯವಾದ ಇಸ್ತಕ್ ಜೊತೆ ಹಾಟ್ ಕಿಬಾಬ್ ಸವಿದೆ, ಅದು ನನ್ನ ಜೀವನದಲ್ಲಿ ಮರೆಯಲಾರದ ಅನುಭವ ಎಂದು ಹೇಳಿದ್ದಾರೆ.
ಜೂನ್ 21 ರಂದು ಮಾಸ್ಕೋ ತಲುಪುವ ಫ್ರಾನ್ಸಿಸ್ ತಮ್ಮನ ಬಹುಕಾಲದ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿದ್ದಾರೆ, ನನ್ನ ಜೀವನದ ಗುರಿ ಮೆಸ್ಸಿ ಅವರನ್ನು ಭೇಟಿ ಮಾಡುವುದಾಗಿದೆ, ಆದರೆ ಅವರನ್ನು ಭೇಟಿ ಮಾಡಲು ಸಾಧ್ಯವಾಗುವುದೋ ಇಲ್ಲವೋ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇರಳದಿಂದ ದುಬೈಗೆ ವಿಮಾನಯಾನ ಮಾಡಿದ ಫ್ರಾನ್ಸಿಸ್ ಅಲ್ಲಿ ಸೈಕಲ್ ಖರೀದಿಸಿ ಯುಎಇ, ಇರಾನ್, ಅಜರ್​ಬೈಜಾನ್ ದೇಶಗಳ ಮೂಲಕ ರಷ್ಯಾ ತಲುಪಿದ್ದಾರೆ. ‘ನಾನು ಬಾಲ್ಯದಿಂದಲೂ ಮೆಸ್ಸಿಯ ಅಪ್ಪಟ ಅಭಿಮಾನಿ. ವಿಶ್ವಕಪ್ ಫುಟ್​ಬಾಲ್ ಪಂದ್ಯ ನೋಡುವುದು ನನ್ನ ದೊಡ್ಡ ಕನಸು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com