ಪಂದ್ಯ ಗೆದ್ದ ಬೆಲ್ಜಿಯಂ
ಫೀಫಾ ವಿಶ್ವ ಕಪ್ 2018
ಫೀಫಾ ವಿಶ್ವಕಪ್ 2018: ಅಗ್ರಸ್ಥಾನದ ಪೈಪೋಟಿಯಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದ ಬೆಲ್ಜಿಯಂ
ಜಿ ಗುಂಪಿನಿಂದ ಅಗ್ರ 2 ತಂಡಗಳಾಗಿ ಈಗಾಗಲೇ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿರುವ ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳ ನಡುವಿನ ಕೊನೆಯ ಲೀಗ್ ಪಂದ್ಯದಲ್ಲಿ ಬೆಲ್ಜಿಯಂ ಜಯ ಸಾಧಿಸಿದ್ದು, ಗ್ರೂಪ್ ನಲ್ಲಿ ಅಗ್ರ ಸ್ಥಾನ ಕಾಯ್ಜುಕೊಂಡಿದೆ.
ಮಾಸ್ಕೋ: ಜಿ ಗುಂಪಿನಿಂದ ಅಗ್ರ 2 ತಂಡಗಳಾಗಿ ಈಗಾಗಲೇ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿರುವ ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳ ನಡುವಿನ ಕೊನೆಯ ಲೀಗ್ ಪಂದ್ಯದಲ್ಲಿ ಬೆಲ್ಜಿಯಂ ಜಯ ಸಾಧಿಸಿದ್ದು, ಗ್ರೂಪ್ ನಲ್ಲಿ ಅಗ್ರ ಸ್ಥಾನ ಕಾಯ್ಜುಕೊಂಡಿದೆ.
ಜಿ ಗುಂಪಿನಲ್ಲಿ ಈಗಾಗಲೇ ಈ ಎರಡೂ ತಂಡಗಳು ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿರುವುದರಿಂದ ನಿನ್ನೆ ನಡೆದ ಲೀಗ್ ಪಂದ್ಯ ಆಟಕ್ಕುಂಟು ಲೆಕ್ಕಕ್ಕಲಿದ ಪಂದ್ಯವಾಗಿತ್ತು. ಕೇವಲ ಗ್ರೂಪ್ ನಲ್ಲಿ ಅಗ್ರ ಸ್ಥಾನಕ್ಕಾಗಿ ಮಾತ್ರ ಈ ತಂಡಗಳು ಕಾದಾಡಿದ್ದವು. ಈ ಕಾದಾಟದಲ್ಲಿ ಬೆಲ್ಜಿಯಂ ಜಯ ಸಾಧಿಸಿದ್ದು, ಇಂಗ್ಲೆಂಡ್ ವಿರುದ್ಧ 1-0 ಅಂತರದ ಜಯ ಸಾಧಿಸಿದೆ. ಪಂದ್ಯದ 51ನೇ ನಿಮಿಷದಲ್ಲಿ ಬೆಲ್ಜಿಯಂನ ಸ್ಟ್ರೈಕರ್ ಅದ್ನಾನ್ ಜನುಝಾಜ್ ಭಾರಿಸಿದ ಏಕೈಕ ಗೋಲು ಬೆಲ್ಜಿಯಂ ತಂಡವನ್ನು ಜಯಶಾಲಿಯನ್ನಾಗಿಸಿತು.
ಈ ಗೆಲುವಿನ ಮೂಲಕ ಬೆಲ್ಜಿಯಂ ನೂತನ ದಾಖಲೆ ನಿರ್ಮಾಣ ಮಾಡಿದ್ದು. ವಿಶ್ವಕಪ್ ನಲ್ಲಿ ತಾನಾಡಿದ ಮೊದಲ ಹಂತದ ಪಂದ್ಯಗಳಲ್ಲಿ ಒಟ್ಟು 7 ಪಂದ್ಯಗಳನ್ನು ಗೆದ್ದಂತಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ