ಫೀಫಾ ವಿಶ್ವಕಪ್ ನಲ್ಲೂ ಪ್ರೀಮಿಯರ್, ಸ್ಪಾನಿಷ್ ಲೀಗ್ ಆಟಗಾರರದ್ದೇ ಪಾರುಪತ್ಯ!

2019ರ ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಇತ್ತ ಟೂರ್ನಿಯುದ್ದಕ್ಕೂ ಪ್ರೀಮಿಯರ್ ಲೀಗ್ ಮತ್ತು ಸ್ಪಾನಿಷ್ ಲೀಗ್ ಆಟಗಾರರು ತಮ್ಮ ಪಾರುಪತ್ಯ ಮುಂದುವರೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಾಸ್ಕೋ: 2019ರ ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಇತ್ತ ಟೂರ್ನಿಯುದ್ದಕ್ಕೂ ಪ್ರೀಮಿಯರ್ ಲೀಗ್ ಮತ್ತು ಸ್ಪಾನಿಷ್ ಲೀಗ್ ಆಟಗಾರರು ತಮ್ಮ ಪಾರುಪತ್ಯ ಮುಂದುವರೆಸಿದ್ದಾರೆ.
ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಈ ವರೆಗೂ ಆಗಿರುವ 48 ಪಂದ್ಯಗಳಲ್ಲಿ ಒಟ್ಟು 122 ಗೋಲುಗಳು ಬಂದಿದ್ದು, ಈ ಪೈಕಿ ಬರೊಬ್ಬರಿ 59 ಗೋಲುಗಳು ಇಂಗ್ಲೆಂಡ್ ಪ್ರೀಮಿಯರ್ ಲೀಗ್ ಮತ್ತು ಸ್ಪಾನಿಷ್ ಲೀಗ್ ಗಳ ಪ್ರಮುಖ ಆಟಗಾರರಿಂದ ಬಂದಿದ್ದಾಗಿದೆ ಎಂಬುದು ವಿಶೇಷ. ಇದಲ್ಲದೆ ವಿಶ್ವಕಪ್ ಟೂರ್ನಿಯಲ್ಲಿ 9 ಸ್ವಂತಗೋಲುಗಳು ದಾಖಲಾಗಿದ್ದು, ಇದೂ ಕೂಡ ವಿಶ್ವಕಪ್ ಟೂರ್ನಿಯ ನೂತನ ದಾಖಲೆಯಾಗಿದೆ. ಉಳಿದಂತೆ ಡೆನ್ಮಾರ್ಕ್ ಮತ್ತು ಫ್ರಾನ್ಸ್ ನಡುವಿನ ಏಕೈಕ ಪಂದ್ಯ ಮಾತ್ರ ಗೋಲುಗಳಿಲ್ಲದೇ ಡ್ರಾದಲ್ಲಿ ಅಂತ್ಯಗೊಂಡಿದೆ.
ಗ್ರೂಪ್ ಹಂತದ ಪಂದ್ಯಗಳಲ್ಲಿ ಒಟ್ಟು 86 ಆಟಗಾರರು ಗೋಲುಗಳನ್ನು ಗಳಿಸಿದ್ದು, ಟೂರ್ನಿಯಲ್ಲಿ ನಡೆದ ಗ್ರೂಪ್ ಹಂತದ ಪಂದ್ಯಗಳಲ್ಲಿ ಸರಾಸರಿ 2.5ರಂತೆ ಗೋಲುಗಳು ದಾಖಲಾಗಿವೆ. ಕಳೆದ ಬಾರಿ ಬ್ರೆಜಿಲ್ ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಸರಾಸರಿ 2.8ರಂತೆ 136 ಗೋಲುಗಳು ದಾಖಲಾಗಿತ್ತು.  ಇಂಗ್ಲೆಂಡ್ ನ ಪ್ರೀಮೀಯರ್ ಲೀಗ್ ಫುಟ್ಬಾಲ್ ಆಟಗಾರರಿಂದ 31 ಗೋಲ್ ಗಳು ದಾಖಲಾಗಿದ್ದು, ಪೋರ್ಚುಗಲ್ ನ ಕ್ರಿಸ್ಟಿಯಾನೋ ರೊನಾಲ್ಡೋ ಸೇರಿದಂತೆ ಸ್ಪಾನಿಷ್ ಫುಟ್ಬಾಲ್ ಲೀಗ್ ಆಡುವ ಆಟಗಾರರಿಂದ 29 ಗೋಲುಗಳು ದಾಖಲಾಗಿವೆ. ಉಳಿದಂತೆ 4 ಗೋಲುಗಳು ವಿವಿದ ತಂಡಗಳ ಎರಡನೇ ಡಿವಿಷನ್ ಫುಟ್ಬಾಲ್ ಲೀಗ್ ಆಡುವ ಆಟಗಾರರಿಂದ ಬಂದಿದೆ.
ಇನ್ನು ಇಂಗ್ಲೆಂಡ್ ಪ್ರೀಮಿಯರ್ ಲೀಗ್ ಆಡುವ ಟೊಟ್ಟೆನ್ಹಾಮ್ ತಂಡದ ಸ್ಟ್ರೈಕರ್ ಇಂಗ್ವೆಂಡ್ ಪರವಾಗಿ ಈ ವರೆಗೂ ಐದು ಗೋಲುಗಳು ಬಾರಿಸಿದ್ದು, ಬೆಲ್ಜಿಯಂ ಪರ ಆಡುತ್ತಿರುವ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪಾರ್ವರ್ಡ್ ಆಟಗಾರ ರೊಮೆಲು ಲುಕಾಕು 4 ಗೋಲುಗಳನ್ನು ಗಳಿಸಿದ್ದಾರೆ.
ಇತ್ತ ಪ್ರೀಮಿಯರ್ ಲೀಗ್ ಆಟಗಾರರಿಗಿಂತ ತಾವೇನೂ ಕಡಿಮೆ ಇಲ್ಲ ಎನ್ನುವಂತೆ ಸ್ಪಾನಿಷ್ ಲೀಗ್ ಆಟಗಾರರೂ ಕೂಡ 29 ಗೋಲುಗಳನ್ನು ಬಾರಿಸಿದ್ದು, ಈ ಪೈಕಿ ಪೋರ್ಚುಗಲ್ ತಂಡ ಸ್ಟಾರ್ ಆಟಗಾರ ಮತ್ತು ರಿಯಲ್ ಮ್ಯಾಡ್ರಿಡ್ ತಂಡದ ಫಾರ್ವರ್ಡ್ ಕ್ರಿಸ್ಟಿಯಾನೋ ರೊನಾಲ್ಡೋ ಪೋರ್ಚುಗಲ್ ತಂಡದ ಪರ 4 ಗೋಲುಗಳನ್ನು ಗಳಿಸಿದ್ದಾರೆ. ಇವರ ಈ ಸಾಧನೆಯ ಫಲವಾಗಿಯೇ ಪೋರ್ಚುಗಲ್ ತಂಡ ಲೀಗ್ ಹಂತದಲ್ಲಿ ತನ್ನ 2 ಪಂದ್ಯಗಳನ್ನು ಗೆದ್ದು ನಾಕೌಟ್ ಗೆ ಲಗ್ಗೆ ಇಟ್ಟಿದೆ. ಅಟ್ಲಾಂಟಿಕೋ ಮ್ಯಾಡ್ರಿಡ್ ತಂಡದ ಆಟಗಾರ ಮತ್ತು ಹಾಲಿ ಸ್ಪೇನ್ ತಂಡದ ಸ್ಟ್ರೈಕರ್ ಡಿಯಾಗೋ ಕೋಸ್ಚಾ ಮೂರು ಗೋಲು ಗಳಿಸಿದ್ದು, ರಷ್ಯಾ ಪರ ಆಡುತ್ತಿರುವ ವಿಲ್ಲಾರ್ ರಿಯಲ್ ತಂಡದ ಮಿಡ್ ಫೀಲ್ಡರ್ ಡೆನಿಸ್ ಚೆರಿಶೆವ್ ಕೂಡ 3 ಗೋಲು ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com