ಫಿಫಾ ವಿಶ್ವಕಪ್ 2014

ಇಟಲಿ ಫೇವರಿಟ್, ಆದ್ರೂ ಕೋಸ್ಟ ರಿಕಾ ಅಪಾಯ

ಇಟಲಿ ಫೇವರಿಟ್, ಆದ್ರೂ ಕೋಸ್ಟ  ರಿಕಾ ಅಪಾಯ
ಕೆಮರೂನ್ ಮತ್ತು ಕ್ರೋವೇಷಿಯಾ ನಡುವೆ ಗುರುವಾರ ನಡೆದ ಪಂದ್ಯಕ್ಕೂ ಮುನ್ನ ಮೈಯಲ್ಲ ಬ್ರೆಜಿಲ್ ಮಯವಾಗಿಸಿಕೊಂಡ ಅಭಿಮಾನಿಯೊಬ್ಬಳು ಕ್ಯಾಮರಾಗೆ ಪೋಸ್ ನೀಡಿದ್ದು ಹೀಗೆ!
Published On :

ನಟಾಲ್: ದಾಖಲೆಯ ಐದನೇ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಇಟಲಿ ತಂಡದ ಆಟಗಾರರು ವಿಶ್ವಕಪ್ ಫುಟ್ಬಾಲ್ ಟೂರ್ನಿಯ ತಮ್ಮ ಎರಡನೇ ಪಂದ್ಯದಲ್ಲಿ ಕೋಸ್ಟ ರಿಕಾ ತಂಡದ ವಿರುದ್ಧವೂ ಜಯಗಳಿಸಿ ಪ್ರಿಕ್ವಾರ್ಟರ್‌ಫೈನಲ್ ಕದ ತಟ್ಟುವ ಕನಸು ಕಾಣುತ್ತಿದ್ದಾರೆ.
ಅದೇ ರೀತಿ ಪ್ರಬಲ ತಂಡವಾಗಿ ಮೂಡಿಬಂದಿರುವ ಕೋಸ್ಟ ರಿಕಾ ಕೂಡ ಇದೇ ಆಸೆಯೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿದೆ. ಹಾಗಾಗಿ, ಶುಕ್ರವಾರ ನಡೆಯಲಿರುವ 'ಡಿ' ಗುಂಪಿನ ತಮ್ಮ ಎರಡನೇ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿರುವ ಇಟಲಿ ಮತ್ತು ಕೋಸ್ಟ ರಿಕಾ ಮಧ್ಯೆ ರೋಚಕ ಹಣಾಹಣಿ ಕಂಡುಬರುವ ನಿರೀಕ್ಷೆಯಿದೆ.
ಇಟಲಿ ತನ್ನ ಮೊದಲ ಪಂದ್ಯದಲ್ಲಿ ಪ್ರಬಲ ಇಂಗ್ಲೆಂಡ್ ತಂಡದ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿದ್ದರೆ, ಕೋಸ್ಟ ರಿಕಾ ತಂಡ 3-1 ಗೋಲುಗಳಿಂದ ಎರಡು ಬಾರಿಯ ಚಾಂಪಿಯನ್ ಹಾಗೂ ಕಳೆದ ಬಾರಿ ಸೆಮಿಫೈನಲ್ ತಲುಪಿದ್ದ ಉರುಗ್ವೆ ವಿರುದ್ಧ ಅಚ್ಚರಿಯಾಗಿ ಗೆದ್ದು ಬೀಗಿತ್ತು.
ಜಾಗತಿಕ ಫುಟ್ಬಾಲ್ ಅಖಾಡದಲ್ಲಿ ಉಭಯ ತಂಡಗಳು ಈವರೆಗೆ ಪರಸ್ಪರ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. ಹತ್ತು ವರ್ಷಗಳ ಹಿಂದೆ (1994ರಲ್ಲಿ) ಅಮೆರಿಕದ ನ್ಯೂ ಹೆವನ್‌ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಇಟಲಿ ತಂಡ ಏಕೈಕ ಗೋಲಿನಿಂದ ಜಯ ಸಾಧಿಸಿತ್ತು.
ಮಾರಿಯೊ ಬಾಲೊಟೆಲ್ಲಿ ಮತ್ತು ಆ್ಯಂಡ್ರಿಯಾ ಪಿರ್ಲೊರಂತಹ ಮಹಾನ್ ಪ್ರತಿಭೆಗಳನ್ನು ಹೊಂದಿರುವ ಇಟಲಿ ತಂಡ ಇಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.  ಇನ್ನು 1990ರಲ್ಲಿ ಪ್ರಿಕ್ವಾರ್ಟರ್‌ಫೈನಲ್ ತಲುಪಿದ್ದೇ ಕೋಸ್ಟ ರಿಕಾ ತಂಡದ ವಿಶ್ವಕಪ್‌ನಲ್ಲಿನ ಉತ್ತಮ ಸಾಧನೆಯಾಗಿದೆ. ಆದರೆ, ಈ ಬಾರಿ ಉತ್ತಮ ಪ್ರದರ್ಶನ ಆರಂಭಿಸಿರುವ ಕಾರಣ ಮತ್ತೊಂದು ಹೆಜ್ಜೆ ಮುಂದಿಡುವ ವಿಶ್ವಾಸ ಆ ತಂಡದಲ್ಲಿದೆ.
ಇಟಲಿ- ಕೋಸ್ಟ ರಿಕಾ
ಗುಂಪು-ಡಿ
ಪಂದ್ಯ ಆರಂಭ: ರಾತ್ರಿ 9.30 ಗಂಟೆ
9    ರ್ಯಾಂಕ್    28
1    ಪಂದ್ಯ    1
1    ಜಯ    0
0    ಸೋಲು    1
1    ಗೋಲು    0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.