ಫಿಫಾ ವಿಶ್ವಕಪ್ 2014

ಭದ್ರತೆ ಬಗ್ಗೆ ಕಳವಳ ಹೆಚ್ಚಿಸಿದ ಅಭಿಮಾನಿ ಆ್ಯಂಡ್ರೆಸ್ಸಾ ಉರ್ಯಾಚ್

ಭದ್ರತೆ ಬಗ್ಗೆ ಕಳವಳ ಹೆಚ್ಚಿಸಿದ ಅಭಿಮಾನಿ ಆ್ಯಂಡ್ರೆಸ್ಸಾ ಉರ್ಯಾಚ್
Published On :

ರಿಯೊ ಡಿ ಜನೈರೊ: ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಟಗಾರರ ಅಭ್ಯಾಸದ ವೇಳೆ ಅಭಿಮಾನಿಗಳು ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಮೈದಾನಕ್ಕೆ ಪ್ರವೇಶಿಸುತ್ತಿರುವುದು ಭದ್ರತೆ ಬಗ್ಗೆ ಆತಂಕ ಮೂಡಿಸಿದೆ. ಇತ್ತೀಚೆಗೆ ಅರ್ಜೆಂಟೀನಾ ಅಭ್ಯಾಸ ಶಿಬಿರದ ವೇಳೆ ಅಭಿಮಾನಿಯೊಬ್ಬಳು ಮೈದಾನಕ್ಕೆ ನುಗ್ಗಿದ ಘಟನೆಯ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಬುಧವಾರ ಮಹಿಳೆಯೊಬ್ಬಳು ಮೈದಾನಕ್ಕೆ ಪ್ರವೇಶಿಸಿದ್ದು, ಭದ್ರತಾ ಸಿಬ್ಬಂದಿ ಆಕೆಯನ್ನು ತಡೆದ ನಂತರ, ತಾನು ಫುಟ್ಬಾಲ್ ತಾರೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಜತೆ ಮಲಗಿದ್ದಾಗಿ ಹೇಳಿಕೊಂಡಿದ್ದಾಳೆ      ವಿಶ್ವಕಪ್ ಪಂದ್ಯಾವಳಿಯ ಆಯೋಜನೆ ಬಗ್ಗೆ ಬ್ರೆಜಿಲ್ ಮೆಚ್ಚುಗೆ ಗಳಿಸುತ್ತಿರುವ ವೇಳೆ ಈ ಘಟನೆಗಳು ಸಂಭವಿಸುತ್ತಿದ್ದು, ಫಿಫಾ ಮೂರು ಬಾರಿ ಭದ್ರತಾ ವೈಫಲ್ಯ ಪ್ರಕರಣಗಳನ್ನು ಕಂಡಿದೆ.ರೊನಾಲ್ಡೊ ಹಾಗೂ ತಂಡದ ಸಹ ಆಟಗಾರರು ಅಭ್ಯಾಸಕ್ಕೆ ಆಗಮಿಸಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಭದ್ರತಾ ಸಿಬ್ಬಂದಿ ಆ್ಯಂಡ್ರೆಸ್ಸಾ ಉರ್ಯಾಚ್ ಎಂಬ ಮಹಿಳೆಯನ್ನು, ಮೈದಾನದಿಂದ ಹೊರಗೆಳೆದು ತಂದರು. ಈ ವೇಳೆ ಆಕೆ ರೊನಾಲ್ಡೊ ಜತೆ ಮಲಗಿದ್ದಾಗಿ ಹೇಳಿದ್ದಳು. ನಂತರ ಟ್ವಿಟರ್‌ನಲ್ಲಿ ಕೋಪದಿಂದ ಪ್ರತಿಕ್ರಿಯೆ ನೀಡಿರುವ ರೊನಾಲ್ಡೊ, ಇದು ನನ್ನ ವೈಯಕ್ತಿಕ ಜೀವನವನ್ನು ಹಾಳು ಮಾಡಲು ನಡೆಸಿರುವ ಸಂಚು. ಎಂದು ಆರೋಪವನ್ನು ನಿರಾಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.