ಬೊಸ್ನಿಯಾ ಗೆಲ್ಲುವ ಆಸೆಯಲ್ಲಿ ನೈಜೀರಿಯಾ
ಕ್ಯೂಬಾ (ಬ್ರೆಜಿಲ್): ತವರಿನಲ್ಲಿ ವಿಶ್ವಕಪ್ ಪಂದ್ಯಗಳನ್ನು ನೋಡುತ್ತಿದ್ದ ಅಭಿಮಾನಿಗಳ ಗುಂಪಿನ ನಡುವೆ ಬಾಂಬ್ ಸ್ಫೋಟಗೊಂಡು 21 ಅಭಿಮಾನಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಮಂಕಾಗಿರುವ ನೈಜೀರಿಯಾ, ಶನಿವಾರ ನಡೆಯಲಿರುವ ಪಂದ್ಯದಲ್ಲಿ ಬೋಸ್ನಿಯ ಹರ್ಜ್ಗೊವಿನಾ ತಂಡವನ್ನು ಎದುರಿಸಲಿದೆ.
ಬ್ರೆಜಿಲ್ ಮತ್ತು ಮೆಕ್ಸಿಕೊ ಪಂದ್ಯ ನಡೆಯುತ್ತಿದ್ದಾಗ ತವರಿನಲ್ಲಿ ಅಭಿಮಾನಿಗಳು ದೊಡ್ಡ ಟಿವಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಸಂದರ್ಭ ಸ್ಫೋಟಗೊಂಡ ಬಾಂಬ್ನಿಂದ ಮಂಕಾಗಿದ್ದರೂ, ಈ ಪಂದ್ಯದಲ್ಲಿ ಜಯ ಕಾಣುವ ಆಸೆಯಲ್ಲಿದೆ ನೈಜೀರಿಯಾ. ಘಟನೆಯ ಹಿನ್ನಲೆಯಲ್ಲಿ ಕೋಚ್ ಸ್ಟೆಫನ್ ಕೇಶಿ ಗರಡಿಯಲ್ಲಿ ಪಳಗಿರುವ ನೈಜೀರಿಯಾ ತಂಡ, ಬುಧವಾರ ಅಭ್ಯಾಸ ನಡೆಸಿದ ಸಮಯದಲ್ಲಿ ಘಟನೆ ಕುರಿತು ಒಂದು ನಿಮಿಷದ ಮೌನ ಆಚರಿಸಿತು. ದುಷ್ಕರ್ಮಿಗಳು ನಡೆಸಿದ ಅಮಾನವೀಯ ಕೃತ್ಯ ಮುಂದಿನ ಪಂದ್ಯಗಳಲ್ಲಿ ಸಮರ್ಥ ಹೋರಾಟ ನಡೆಸಲು ತಂಡಕ್ಕ ಯಾವುದೇ ರೀತಿಯ ಅಡ್ಡಿ ಉಂಟುಮಾಡದು ಎಂದು ತಂಡದ ಮಾಧ್ಯಮ ಅಧಿಕಾರಿ ಬೆನ್ ಅಲೈಯಾ ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ, ನೈಜಿರಿಯಾ ನಾಲ್ಕು ಅಂಕಗಳೊಂದಿಗೆ ನಾಕೌಟ್ ಹಂತಕ್ಕೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಈ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಇರಾನ್ ವಿರುದ್ಧ ಡ್ರಾ ಸಾಧಿಸಿದ್ದ ನೈಜೀರಿಯಾ ಈ ಪಂದ್ಯದಲ್ಲಿ ಜಯ ಕಾಣಲು ಬೇಕಾದ ಸೂಕ್ತ ಕಾರ್ಯತಂತ್ರಗಳನ್ನು ರೂಪಿಸಿಕೊಂಡಿದೆ. ಅಲ್ಲದೆ, ದುರ್ಬಲ ಇರಾನ್ ವಿರುದ್ಧ ಡ್ರಾ ಸಾಧಿಸುವುದರೊಂದಿಗೆ, ವಿಶ್ವಕಪ್ನಲ್ಲಿ ಇದುವರೆಗೂ ಆಡಿದ 9 ಪಂದ್ಯಗಳಲ್ಲಿ ಜಯ ಕಾಣದೇ ಉಳಿಯುವಂತೆ ಮಾಡಿದೆ. ಇನ್ನು ಬೋಸ್ನಿಯಾ, ತನ್ನ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 2-1 ಗೋಲುಗಳಿಂದ ಸೋಲನುಭವಿಸಿದೆ. ಆ ಪಂದ್ಯದಲ್ಲಿ ಪವಾಡದ ಗೋಲು ದಾಖಲಿಸಿದ್ದ ಲಯೋನೆಲ್ ಮೆಸ್ಸಿ ತಮ್ಮ ಮೊದಲ ಗೋಲು ದಾಖಲಿಸಿದ್ದರು.
ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಇತಿಹಾಸದ 800ನೇ ಪಂದ್ಯ ಇದಾಗಿರುವುದು ಪಂದ್ಯದ ಮತ್ತೊಂದು ವಿಶೇಷವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

