ನಾಕೌಟ್ ಲೆಕ್ಕಾಚಾರದಲ್ಲಿ ಬೆಲ್ಜಿಯಂ- ರಷ್ಯಾ
ರಿಯೊ ಡಿ ಜನೈರೊ: ಪ್ರಬಲ ಬೆಲ್ಜಿಯಂ ತಂಡಕ್ಕೆ ಸವಾಲು ನೀಡಿ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ನಾಕೌಟ್ ಹಂತದ ಆಸೆಯನ್ನು ಜೀವಂತಾಗಿರಿಸಿಕೊಳ್ಳಲು ರಷ್ಯಾ ಲೆಕ್ಕಾಚಾರ ಹಾಕಿದೆ.
ಭಾನುವಾರ ಇಲ್ಲಿನ ಮಾರಕಾನ ಕ್ರೀಡಾಂಗಣದಲ್ಲಿ ನಡೆಯಲಿರುವ ಎಚ್ ಗುಂಪಿನ ಪಂದ್ಯದಲ್ಲಿ ಈಗಾಗಲೇ ಗೆಲವಿನೊಂದಿಗೆ ಶುಭಾರಂಭ ಮಾಡಿರುವ ಬೆಲ್ಜಿಯಂ ಗೆಲವು ದಾಖಲಿಸಿದರೆ, ನಾಕೌಟ್ ಹಂತದಲ್ಲಿ ಸ್ಥಾನ ಖಚಿತವಾಗಲಿದೆ. ಇನ್ನು ರಷ್ಯಾ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿರುವ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಗೆಲವು ದಾಖಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಉಭಯ ತಂಡಗಳು ಇದುವರೆಗೂ 8 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಬೆಲ್ಜಿಯಂ 3ರಲ್ಲಿ ಗೆಲವು ದಾಖಲಿಸಿದರೆ, ರಷ್ಯಾ ನಾಲ್ಕು ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ರಷ್ಯಾ, ಬೆಲ್ಜಿಯಂ ತಂಡಕ್ಕೆ ಉತ್ತಮ ಸವಾಲು ನೀಡಿ ಗೆಲವಿನ ಲಯಕ್ಕೆ ಬರುವ ಲೆಕ್ಕಾಚಾರ ಅಭಿಮಾನಿಗಳದ್ದಾಗಿದೆ.
ವೇಯ್ನ್ ರೂನಿ ಕ್ಷಮೆಯಾಚನೆ
ಬ್ರೆಜಿಲ್: ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದಲ್ಲಿ ಇಂಗ್ಲೆಂಡ್ ತಂಡ ಹೀನಾಯ ಪ್ರದರ್ಶನದಿಂದ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರ ಬಿದ್ದಿರುವುದಕ್ಕೆ, ತಂಡದ ಖ್ಯಾತ ಆಟಗಾರ ವೇಯ್ನ್ ರೂನಿ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಇಂಗ್ಲೆಂಡ್ ತಂಡ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಸಾಕಷ್ಟು ಕುಗ್ಗಿಹೋಗಿದ್ದೇನೆ ಎಂದು ಹೇಳಿರುವ ರೂನಿ, ಫೇಸ್‌ಬುಕ್‌ನಲ್ಲಿ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ. ನಾವು ಈ ಬಾರಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದೇವೆ. ಇಂಗ್ಲೆಂಡ್‌ನಿಂದ ಬ್ರೆಜಿಲ್‌ವರೆಗೂ ಪ್ರಯಾಣ ಬೆಳೆಸಿ ಬೆಂಬಲಿಸಿದ ಹಾಗೂ ಮನೆಗಳಲ್ಲೇ ನಮಗೆ ಪ್ರೋತ್ಸಾಹ ನೀಡಿದ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ. ಈ ಫೇಸ್‌ಬುಕ್ ಪೋಸ್ಟ್‌ಗೆ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಸಹ ಬಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

