ಅಲ್ಜೀರಿಯಾ ಬೇಟೆಗೆ ಜರ್ಮನಿ ಸನ್ನದ್ಧ

ಪೊರ್ಟೊ ಅಲೆಗ್ರೆ: ಈಗಾಗಲೇ ಮೂರು ಬಾರಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿರುವ ಜರ್ಮನಿ ಆಟಗಾರರು ಈಗ ಮಗದೊಮ್ಮೆ ಆ ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದ್ದು, ಅಲ್ಜೀರಿಯಾ ವಿರುದ್ಧ ಗೆದ್ದು ಪ್ರಶಸ್ತಿಯತ್ತ ಇನ್ನೊಂದು ಹೆಜ್ಜೆ ಮುಂದಿರಿಸುವ ಆಶಾಭಾವನೆ ಹೊಂದಿದೆ.
ಆದರೆ, ಒಮ್ಮೆಯಾದರೂ ವಿಶ್ವಕಪ್ ಗೆದ್ದೇ ತೀರಬೇಕೆಂಬ ಛಲದಿಂದ ಮುಂದಡಿ ಇಡುತ್ತಿರುವ ಅಲ್ಜೀರಿಯಾ ಆಟಗಾರರು, ಜರ್ಮನಿ ಮುಂದೆ ಕಠಿಣ ಸವಾಲು ನಿಲ್ಲಿಸಿ ಗೆಲವು ತನ್ನದಾಗಿಸಿಕೊಳ್ಳಲು ಹೊಂಚು ಹಾಕಿದ್ದಾರೆ. ಹಾಗಾಗಿ, ಎಸ್ಟಾಡಿಯೊ ಬೇರಾ-ರಿಯೊ ಕ್ರೀಡಾಂಗಣದಲ್ಲಿ ಮಂಗಳವಾರ ನಸುಕಿನಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪರಸ್ಪರ ಎದುರಾಗಲಿರುವ ಜರ್ಮನಿ ಮತ್ತು ಅಲ್ಜೀರಿಯಾ ಹೊಸತಂತ್ರ ರೂಪಿಸಿಕೊಂಡು ಗೆಲ್ಲುವ ಮನಸ್ಸಿನೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿವೆ. ಜರ್ಮನಿ ತಂಡ ಲೀಗ್ ಹಂತದಲ್ಲಿ ಜಿ ಗುಂಪಿನ ಅಗ್ರಸ್ಥಾನಿ ತಂಡವಾಗಿ 16ರ ಘಟ್ಟ ತಲುಪಿದೆ. ಆದರೆ, ಪ್ರಮುಖ ಆಟಗಾರರಲ್ಲಿ ಒಬ್ಬರಾದ ಲುಕಾಸ್ ಪೊಡೊಲ್ಸ್ಕಿ ತೊಡೆ ನೋವಿನಿಂದ ಬಳಲುತ್ತಿರುವ ಕಾರಣ ಈ ಪಂದ್ಯದಿಂದ ಹೊರಗುಳಿಯುತ್ತಿರುವುದು ಜರ್ಮನಿಗೆ ಹಿನ್ನಡೆಯಾಗಿದೆ.
ಜರ್ಮನಿ-ಅಲ್ಜೀರಿಯಾ
(ಸಮಯ-ನಸುಕಿನ 1.30 ಗಂಟೆ)
17-ರ್ಯಾಂಕ್ 44
ಮುಖಾಮುಖಿ
2- ಪಂದ್ಯ 2
0- ಜಯ 2
1- ಗೋಲು 4
ಒಟ್ಟು ಗೋಲು 5
ಗುಂಪಿನ ನಡೆ
ಜರ್ಮನಿ
ಪೋರ್ಚುಗಲ್ ವಿರುದ್ಧ 4-0 ಜಯ
ಘಾನಾ ವಿರುದ್ಧ 2-2 ಡ್ರಾ
ಅಮೆರಿಕ ವಿರುದ್ಧ 1-0 ಜಯ
ಅಲ್ಜೀರಿಯಾ
ಬೆಲ್ಜಿಯಂ ವಿರುದ್ಧ 1-2 ಸೋಲು
ದಕ್ಷಿಣ ಕೊರಿಯಾ ವಿರುದ್ಧ 4-2 ಜಯ
ರಷ್ಯಾ ವಿರುದ್ಧ 1-1 ಡ್ರಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


