ವಾಂಗಿಬಾತ್

ರುಚಿಕರವಾದ ವಾಂಗಿಬಾತ್ ಮಾಡುವ ವಿಧಾನ...
ವಾಂಗಿಬಾತ್
ವಾಂಗಿಬಾತ್
ಬೇಕಾಗುವ ಸಾಮಾಗ್ರಿಗಳು
  • ಅಕ್ಕಿ- 1 ಬಟ್ಟಲು
  • ಸಾಸಿವೆ - 1 ಚಮಚ
  • ಉದ್ದಿನಬೇಳೆ - 1 ಚಮಚ
  • ಕರಿಬೇವು - ಸ್ವಲ್ಪ
  • ಏಲಕ್ಕಿ - 2-3
  • ಒಣಮೆಣಸಿನ ಕಾಯಿ - 5-6
  • ಮೆಂತ್ಯ - 1 ಚಮಚ
  • ಕೊಬ್ಬರಿ - ಅರ್ಧ ಬಟ್ಟಲು
  • ಉದ್ದ ಬದನೆಕಾಯಿ - 2-3
  • ಕಡ್ಲೆಬೇಳೆ - 2 ಚಮಚ
  • ಹುಣಸೆಹಣ್ಣು - ಸ್ವಲ್ಪ
  • ಚಕ್ಕೆ - ಸ್ವಲ್ಪ
  • ಲವಂಗ - ಸ್ವಲ್ಪ
  • ಅರಿಶನ - ಅರ್ಧ ಚಮಚ
  • ದನಿಯಾ - 1 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
  • ಅಕ್ಕಿ ತೊಳೆದು ಅನ್ನವನ್ನು ಮಾಡಿಟ್ಟುಕೊಂಡು, ಅನ್ನ ತಣ್ಣಗಾಗಲು ಬಿಡಬೇಕು. 
  • ಸಣ್ಣ ಬಟ್ಟಲು ತೆಗೆದುಕೊಂಡು ಅದಕ್ಕೆ ಹುಣಸೆಹಣ್ಣು, ಸ್ವಲ್ಪ ನೀರು ಹಾಕಿ ನೆನೆಯಲು ಬಿಡಬೇಕು.
  • ಒಲೆಯ ಮೇಲೆ ಪ್ಯಾನ್ ಇಟ್ಟು ಬಿಸಿ ಮಾಡಿ ನಂತ ಕಡ್ಲೆಬೇಳೆ, ಉದ್ದಿನಬೇಳೆ, ದನಿಯಾ, ಮೆಂತ್ಯ, ಚಕ್ಕೆ, ಏಲಕ್ಕಿ, ಲವಂಗ, ಒಣಗಿದ ಮೆಣಸಿನ ಕಾಯಿ, ಅರಿಶಿನ ಹಾಗೂ ಕೊಬ್ಬರಿ ಎಲ್ಲವನ್ನು ಕೆಂಪಗೆ ಹುರಿದುಕೊಂಡು ತಣ್ಣಗಾಗಲು ಬಿಡಬೇಕು. 
  • ತಣ್ಣಗಾದ ಬಳಿಕ ಮಿಕ್ಸಿ ಜಾರ್ ಗೆ ಪುಡಿ ಮಾಡಿಕೊಳ್ಳಬೇಕು.
  • ಬದನೆಕಾಯಿಯನ್ನು ಚೆನ್ನಾಗಿ ತೊಳೆದೆ ಉದ್ದುದ್ದವಾಗಿ ಹೆಚ್ಚಿಕೊಳ್ಳಬೇಕು. 
  • ಮತ್ತೊಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ, ಕಡ್ಲೆಬೇಳೆ, ಉದ್ದಿನಬೇಳೆ, ಅರಿಶಿನ, ಕರಿಬೇವಿನ ಸೊಪ್ಪು ಹಾಗಿ ಒಗ್ಗರಣೆ ಮಾಡಿ ಹೆಚ್ಚಿಕೊಂಡ ಬದನೆಕಾಯಿ ಹಾಕಿ ಹುರಿಯಬೇಕು. 
  • 8-10 ನಿಮಿಷದ ಬಳಿಗ ಹುಣಸೆಹಣ್ಣಿನ ರಸ ಸೇಸಿ 5-10 ನಿಮಿಷ ಬದನೆಕಾಯಿ ಬೇಯಲು ಬಿಡಬೇಕು. 
  • ನಂತರ ವಾಂಗೀಬಾತ್ ಪುಡಿ, ಉಪ್ಪು, ಅನ್ನವನ್ನು ಸೇರಿಸಿ ಮಿಶ್ರಣವನ್ನು ಅನ್ನಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ವಾಂಗಿಬಾತ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com