ಆಲೂ ಪೂರಿ

ರುಚಿಕರವಾದ ಆಲೂ ಪೂರಿ ಮಾಡುವ ವಿಧಾನ...
ಆಲೂ ಪೂರಿ
ಆಲೂ ಪೂರಿ
ಬೇಕಾಗುವ ಪದಾರ್ಥಗಳು
  • ಆಲೂಗಡ್ಡೆ - ಬೇಯಿಸಿದ್ದು 2-4
  • ಮೈದಾ ಹಿಟ್ಟು- 150 ಗ್ರಾಂ
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಅರಿಶಿನದ ಪುಡಿ - ಸ್ವಲ್ಪ
  • ಅಚ್ಚ ಖಾರದ ಪುಡಿ - ಅರ್ಧ ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ಎಣ್ಣೆ - ಕರಿಯಲು
ಮಾಡುವ ವಿಧಾನ...
  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಬೇಯಿಸಿದ ಆಲೂಗಡ್ಜೆಯನ್ನು ನುಣ್ಣಗೆ ಮಾಡಿಕೊಳ್ಳಬೇಕು. ನಂತರ ಮೈದಾ ಹಿಟ್ಟು, ಅರಿಶಿನ, ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 
  • ನಂತರ ಸ್ವಲ್ಪ ನೀರು ಹಾಕಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿಕೊಳ್ಳಬೇಕು. ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ನೆನೆಯಲು ಬಿಡಬೇಕು. 
  • ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಸ್ವಲ್ಪ ಎಣ್ಣೆ ಹಾಕಿ ಲಟ್ಟಿಸಿಕೊಳ್ಳಬೇಕು. 
  • ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಲಟ್ಟಿಸಿಕೊಂಡ ಪೂರಿಗಳನ್ನು ಅದಕ್ಕೆ ಹಾಕಿ ಕೆಂಪಗೆ ಸುಟ್ಟರೆ, ರುಚಿಕರವಾದ ಆಲೂ ಪೂರಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com