ರಾಗಿ ದೋಸೆ

ಆರೋಗ್ಯಕರ ರಾಗಿ ದೋಸೆ ಮಾಡುವ ವಿಧಾನ...
ರಾಗಿ ದೋಸೆ
ರಾಗಿ ದೋಸೆ
ಬೇಕಾಗುವ ಪದಾರ್ಥಗಳು
  • ರಾಗಿ ಹಿಟ್ಟು - 1 ಬಟ್ಟಲು
  • ತೆಂಗಿನ ತುರಿ - ಅರ್ಧ ಬಟ್ಟಲು
  • ಮೊಸರು - ಅರ್ಧ ಬಟ್ಟಲು
  • ನೀರು - ಅಗತ್ಯಕ್ಕೆ ಅನುಸಾರವಾಗಿ
  • ಉಪ್ಪು - ರುಚಿಗೆ ತಕ್ಕಷ್ಟು
  • ಎಣ್ಣೆ - ಅಗತ್ಯಕ್ಕೆ ಅನುಸಾರವಾಗಿ
ಮಾಡುವ ವಿಧಾನ...
  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಆದಕ್ಕೆ ರಾಗಿ ಹಿಟ್ಟು, ತೆಂಗಿನ ತುರಿ, ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಮತ್ತೆ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನಂತೆ ಕಲಸಿಕೊಳ್ಳಬೇಕು.
  • ಒಲೆಯ ಮೇಲೆ ತವಾ ಇಟ್ಟು ಕಾಯಬಿಟ್ಟು. ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಮಿಶ್ರಣ ಮಾಡಿಕೊಂಡ ರಾಗಿ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲಿ ಕೆಂಪಗೆ ಸುಟ್ಟರೆ ರುಚಿಕರ ಹಾಗೂ ಆರೋಗ್ಯಕರವಾದ ರಾಗಿ ದೋಸೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com