ಬದನೆಕಾಯಿ ರವೆ ಫ್ರೈ

ರುಚಿಕರವಾದ ಬದನೆಕಾಯಿ ರವೆ ಫ್ರೈ ಮಾಡುವ ವಿಧಾನ...
ಬದನೆಕಾಯಿ ರವೆ ಫ್ರೈ
ಬದನೆಕಾಯಿ ರವೆ ಫ್ರೈ
ಬೇಕಾಗುವ ಪದಾರ್ಥಗಳು
  • ಗುಂಡು ಬದನೆಕಾಯಿ - 3-4
  • ಅಚ್ಚ ಖಾರದ ಪುಡಿ - 2 ಚಮಚ
  • ಅರಿಶಿನ
  • ಇಂಗು
  • ಅಕ್ಕಿ ಹಿಟ್ಟು
  • ಉಪ್ಪು
  • ಸಣ್ಣ ರವೆ
  • ಎಣ್ಣೆ - ಕರಿಯಲು
ಮಾಡುವ ವಿಧಾನ...
  • ಮೊದಲು ಬದನೆಕಾಯಿ ಚೆನ್ನಾಗಿ ತೊಳೆದು ಜುಟ್ಟನ್ನು ತೆಗೆದು ಮಧ್ಯಮ ಗಾತ್ರಕ್ಕೆ ಬದನೆಯಾಯನ್ನು ಕತ್ತರಿಸಿಕೊಳ್ಳಬೇಕು. 
  • ಬಳಿಕ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಅಚ್ಚಖಾರದ ಪುಡಿ, ಅರಿಶಿನ, ಉಪ್ಪು, ಚಿಟಿಕೆ ಇಂಗು, ಅಕ್ಟಿ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಬೇಕು. 
  • ಈ ಮುಶ್ರಣಕ್ಕೆ ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಂಡ ಬದನೆಕಾಯಿಯನ್ನು ಹಾಕಿ ಮಸಾಲೆ ಬದನೆಕಾಯಿಗೆ ಅಂಟುವಂತೆ ಮಾಡಿಟ್ಟುಕೊಳ್ಳಬೇಕು. 
  • ತಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ ಸಣ್ಣ ರವೆ, ಉಪ್ಪು, ಖಾರದ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಬಳಿಕ ಮಸಾಲೆ ಹಚ್ಚಿದ ಬದನೆಕಾಯಿಗಳನ್ನು ತೆಗೆದುಕೊಂಡು ರವೆಯೊಂದಿಗೆ ಹೊರಳಿಸಬೇಕು. 
  • ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬದನೆಕಾಯಿಗಳನ್ನು ಹಾಕಿ ಚೆನ್ನೈಗಿ ಎರಡೂ ಕಡೆ ಫ್ರೈ ಮಾಡಿದರೆ ರುಚಿಕರವಾದ ಬದನೆಕಾಯಿ ಫ್ರೈ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com