ಕಾಜು ಆ್ಯಪಲ್

ರುಚಿಕರವಾದ ಕಾಜು ಆ್ಯಪಲ್ ಮಾಡುವ ವಿಧಾನ...
ಕಾಜು ಆ್ಯಪಲ್
ಕಾಜು ಆ್ಯಪಲ್
ಬೇಕಾಗುವ ಪದಾರ್ಥಗಳು
  • ಗೋಡಂಬಿ - 2 ಬಟ್ಟಲು
  • ಸಕ್ಕರೆ - 1 ಬಟ್ಟಲು
  • ಬಾದಾಮಿ - ಅರ್ಧ ಬಟ್ಟಲು 
  • ಏಲಕ್ಕಿ - ಚಿಟಿಕೆಯಷ್ಟು
  • ತುಪ್ಪ - ಸ್ವಲ್ಪ
  • ಹಾಲು - 2 ಚಮಚ
  • ಕೇಸರಿ ದಳ- 2-3
  • ಲವಂಗ- 3
ಮಾಡುವ ವಿಧಾನ...
  • ಮೊದಲು ಗೋಡಂಬಿಯನ್ನು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಪಿಸಿಕೊಳ್ಳಬೇಕು. ನಂತರ ಚೆನ್ನಾಗಿ ತೊಳೆದು ನುಣ್ಣಗೆ ರುಬ್ಬಿಕೊಳ್ಳಬೇಕು.
  • ದಪ್ಪ ತಳದ ಪಾತ್ರೆಯಲ್ಲಿ ನೀರಿನೊಂದಿಗೆ ಸಕ್ಕರೆ, ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಂಡು ಅದಕ್ಕೆ ರುಬ್ಬಿಕೊಂಡ ಗೋಡಂಬಿಯನ್ನು ಹಾಕಿ ಹುರಿಯಬೇಕು. 
  • ಬಳಿಕ ಸ್ವಲ್ಪ ಏಲಕ್ಕಿ ಪುಡಿ, ಕೇಸರಿಯನ್ನು 1 ಚಮಚ ನೀರಿನಲ್ಲಿ ಸೇರಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಸ್ವಲ್ಪ, ಸ್ವಲ್ಪವೇ ತುಪ್ಪ ಹಾಕಿ ಮಿಶ್ರಣ ಪಾತ್ರೆಯ ತಳ ಬಿಡುವವರೆಗೂ ಕೈಯಾಡಿಸುತ್ತಿರಬೇಕು. ನಂತರ ಕೆಳಗಿಳಿಸಿ ಆರಲು ಬಿಡಬೇಕು. 
  • ಮತ್ತೊಂದೆಡೆ ಬಾದಾಮಿಯನ್ನು ಪುಡಿ ಮಾಡಿಕೊಂಡು ಸಕ್ಕರೆ ಪಾಕದಲ್ಲಿ ಹಾಕಿ ಹುರಿಯಬೇಕು. ಅದು ತಳ್ಳಬಿಡುತ್ತಿರಬೇಕಾದರೆ ತುಪ್ಪವನ್ನು ಹಾಕಿ ಆರಲು ಬಿಡಬೇಕು. 
  • ನಂತರ ಗೋಡಂಬಿ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಲಟ್ಟಿಸಿಕೊಂಡು ಮಧ್ಯ ಭಾಗದಲ್ಲಿ ಬಾದಾಮಿ ಮಿಶ್ರಣವನ್ನು ಇಟ್ಟು ಆ್ಯಪಲ್ ಆಕಾರದಲ್ಲಿ ಉಂಡೆಯಂತೆ ಮಾಡಿ, ಮಧ್ಯಭಾಗದಲ್ಲಿ ಒಂದು ಲವಂಗ ಇಟ್ಟರೆ ರುಚಿಕರವಾದ ಕಾಜು ಆ್ಯಪಲ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com