ಬ್ರೆಡ್ ಜಾಮೂನ್

ಬ್ರೆಡ್ ಜಾಮೂನ್ ಮಾಡುವ ವಿಧಾನ...
Bread jamoon
Bread jamoon
ಬೇಕಾಗುವ ಪದಾರ್ಥಗಳು...
  • ಬ್ರೆಡ್ ಪೀಸ್ ಗಳು - 6-8
  • ಮೈದಾ ಹಿಟ್ಟು - 4 ಚಮಚ
  • ತುಪ್ಪ- 1 ಚಮಚ
  • ಎಣ್ಣೆ - ಕರಿಯಲು ಅಗತ್ಯವಿದ್ದಷ್ಟು
  • ಸಕ್ಕರೆ - 2 ಲೋಟ
  • ಏಲಕ್ಕಿ ಪುಡಿ - ಚಿಟಿಕೆಯಷ್ಟು
ಮಾಡುವ ವಿಧಾನ...
  • ಮೊದಲು ಬ್ರೆಡ್ ನ ಬಿಳಿಭಾಗವನ್ನು ಮಾತ್ರ ಕತ್ತರಿಸಿಕೊಂಡು ಅದನ್ನು ನೀರಿನಲ್ಲಿ ಮುಳುಗಿಸಿ ನೀರು ತೆಗೆದು ಮಿಕ್ಸಿಂಗ್ ಬೌಲ್ ಗೆ ಹಾಕಬೇಕು. 
  • ನಂತರ ಇದಕ್ಕೆ ಉಂಡೆಯ ಹದಕ್ಕೆ ಬರುವಷ್ಟು ಮೈದಾ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. 
  • ನಂತರ ತುಪ್ಪ ಹಾಕಿ ಪುನಃ ಚೆನ್ನಾಗಿ ನಾದಿಕೊಂಡು ಬೇಕಾದ ಆಕಾರಕ್ಕೆ ಜಾಮೂನ್ ಮಾಡಿ ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿದುಕೊಳ್ಳಬೇಕು. 
  • ನಂತರ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ನೀರು, ಸಕ್ಕರೆ ಹಾಗೂ ಏಲಕ್ಕಿ ಪುಡಿ ಹಾಕಿ ಪಾಕ ತಯಾರು ಮಾಡಿಕೊಳ್ಳಬೇಕು. ಪಾಕ ತಣ್ಣಗಾದ ಬಳಿಕ ಕರಿದುಕೊಂಡ ಜಾಮೂನ್ ಗಳನ್ನು ಇದಕ್ಕೆ ಹಾಕಿ ನೆನೆಯಲು ಬಿಟ್ಟರೆ ರುಚಿಕರವಾದ ಬ್ರೆಡ್ ಜಾಮೂನ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com