ದಾಳಿಂಬೆ-ನಿಂಬೆ ರಸ

ದಾಹ ನೀಗಿಸುವ ದಾಳಿಂಬೆ-ನಿಂಬೆ ರಸ ಮಾಡುವ ವಿಧಾನ...
ದಾಳಿಂಬೆ-ನಿಂಬೆ ರಸ
ದಾಳಿಂಬೆ-ನಿಂಬೆ ರಸ
ಬೇಕಾಗುವ ಪದಾರ್ಥಗಳು
  • ತಂಪಾದ ನೀರು - 1 ಲೋಟ
  • ನಿಂಬೆಹಣ್ಣಿನ ರಸ - ಸ್ವಲ್ಪ
  • ದಾಳಿಂಬೆ ರಸ - 1 ಲೋಟ
  • ಪುದೀನಾ ಎಲೆ- 4-5
  • ಸಕ್ಕರೆ - 1-2 ಚಮಚ
ಮಾಡುವ ವಿಧಾನ...
  • ಒಲೆಯ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಸಕ್ಕರೆ ಹಾಗೂ ಪುದೀನ ಎಲೆಗಳನ್ನು ಹಾಕಬೇಕು. ಸಕ್ಕರೆ ಕರುವವರೆಗೂ ಕೈಯಾಡಿಸಿ ತೆಗೆಯಬೇಕು. 
  • ನಂತರ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ದಾಳಿಂಬೆ ಹಾಗೂ ನಿಂಬೆ ರಸ, ಬಿಸಿ ಮಾಡಿದ್ದ ಸಕ್ಕರೆ ಪಾಕವನ್ನು ಹಾಕಿ ಜ್ಯೂಸ್ ತಯಾರು ಮಾಡಿಕೊಳ್ಳಬೇಕು. ನಂತರ ಇದನ್ನು ಒಂದು ಲೋಟಕ್ಕೆ ಹಾಕಿ ಫ್ರಿಡ್ಜ್ ನಲ್ಲಿಡಬೇಕು. ತಣ್ಣಗಾದ ಬಳಿಕ ಪುದೀನಾ ಎಲೆಗಳೊಂದಿಗೆ ಅಲಂಕರಿಸಿದರೆ, ರುಚಿಕವಾದ ದಾಳಿಂಬೆ-ನಿಂಬೆ ರಸ ಕುಡಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com