ಬಟರ್ ನಾನ್

ರುಚಿಕರವಾದ ಬಟರ್ ನಾನ್ ಮಾಡುವ ವಿಧಾನ....
ಬಟರ್ ನಾನ್
ಬಟರ್ ನಾನ್
ಬೇಕಾಗುವ ಪದಾರ್ಥಗಳು
  • ಮೈದಾ ಹಿಟ್ಟು - 1 ಬಟ್ಟಲು
  • ಸಕ್ಕರೆ - ಅರ್ಧ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಬೆಣ್ಣೆ- ಅರ್ಧ ಬಟ್ಟಲು
  • ಎಣ್ಣೆ - 1 ಚಮಚ
  • ಮೊಸರು - ಅರ್ಧ ಬಟ್ಟಲು
  • ಅಡುಗೆ ಸೋಡಾ - ಅರ್ಧ ಚಮಚ
  • ಬೇಕಿಂಗ್ ಪೌಡರ್ - ಅರ್ಧ ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಾಡುವ ವಿಧಾನ...
  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಸಕ್ಕರೆ, ಅಡುಗೆ ಸೋಡಾ, ಉಪ್ಪು, ಬೇಕಿಂಗ್ ಪೌಡರ್, ಮೊಸರು, ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ನೀರು ಹಾಕಿ ಹಿಟ್ಟನ್ನು ತಯಾರಿಸಿ, 10-15 ನಿಮಿಷ ನೆನೆಯಲು ಬಿಡಬೇಕು. 
  • ಬೆಣ್ಣೆಯನ್ನು ಕಾಯಿಸಿ ಅದನ್ನು ಬಟ್ಟಲಿಗೆ ಹಾಕಿಕೊಂಡು, ಸಣ್ಣಗೆ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. 
  • ನಂತರ ಹಿಟ್ಟನ್ನು ಸಣ್ಣಗೆ ಉಂಡೆಗಳನ್ನಾ ಮಾಡಿಕೊಂಡು ಲಟ್ಟಿಸಿಕೊಳ್ಳಬೇಕು. ಒಂದು ಬದಿಯಲ್ಲಿ ನೀರಿನಲ್ಲಿ ಸವರಿಟ್ಟುಕೊಳ್ಳಬೇಕು. 
  • ತವಾವನ್ನು ಒಲೆಯ ಮೇಲಿಟ್ಟು ಅದು ಕಾದ ನಂತರ ಸ್ವಲ್ಪ ಬೆಣ್ಣೆ ಹಾಕಿ ಲಟ್ಟಿಸಿಕೊಂಟ ಹಿಟ್ಟನ್ನು ಹಾಕಿ ಒಂದು ಬದಿಯಲ್ಲಿ ಸುಡಬೇಕು. ಮತ್ತೊಂದು ಬದಿಗೆ ಬೆಣ್ಣೆಯನ್ನು ಹಾಕಿ ಸವರಿ, ಎರಡೂ ಬದಿಯಲ್ಲೂ ಕಂಪಗೆ ಸುಟ್ಟರೆ ರುಚಿಕರವಾದ ಬಟಲ್ ನಾನ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com