ಮೈಸೂರು ಸಾರು

ರುಚಿಕರವಾದ ಮೈಸೂರು ಸಾರು ಮಾಡುವ ವಿಧಾನ...
ಮೈಸೂರು ಸಾರು
ಮೈಸೂರು ಸಾರು
ಬೇಕಾಗುವ ಸಾಮಾಗ್ರಿಗಳು
  • ಟೊಮೆಟೋ ಹಣ್ಣು -3-4
  • ಹುಣಸೆಹಣ್ಣು - ಸ್ವಲ್ಪ
  • ತೊಗರಿ ಬೇಳೆ - ಸ್ವಲ್ಪ
  • ತೆಂಗಿನಕಾಯಿ ತುರಿ - ಸ್ವಲ್ಪ
  • ದನಿಯಾ ಪುಡಿ- ಅರ್ಧ ಚಮಚ
  • ಜೀರಿಗೆ- ಸ್ವಲ್ಪ
  • ಕಾಳು ಮೆಣಸು- ಸ್ವಲ್ಪ
  • ಕಡಲೆಬೇಳೆ- ಸ್ವಲ್ಪ
  • ಒಣಗಿದ ಮೆಣಸಿನಕಾಯಿ- 5-6
  • ಕರಿಬೇವು- ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
  • ತೊಗರಿ ಬೇಳೆಯನ್ನು ಬೇಯಿಸಿಟ್ಟುಕೊಂಡಿರಬೇಕು. ಮೊದಲಿಗೆ ದನಿಯಾ, ಎರಡು ಒಣಗಿದ ಮೆಣಸಿನ ಕಾಯಿ, ಕಾಳು ಮೆಣಸು, ಜೀರಿಗೆ, ಕಡಲೆಬೇಳೆಯನ್ನು ಸಣ್ಣ ಹುರಿಯಲ್ಲಿ ಹುರಿದುಕೊಂಡು ನಂತರ, ತುರಿದ ತೆಂಗಿನ ತುರಿಯನ್ನು ಸೇರಿಸಿ ಕೆಂಪಗೆ ಹುರಿದುಕೊಳ್ಳಬೇಕು. 
  • ನೀರಿನ ಅಂಶವೆಲ್ಲಾ ಹೋದ ಮೇಲೆ ಮಿಕ್ಸಿ ಜಾರ್ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಬೇಕು. 
  • ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ ಟೊಮೆಟೋ ರಸ ಹಾಗೂ ಹುಣಸೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
  • ಇದಕ್ಕೆ ಈ ಮೊದಲೇ ಬೇಯಿಸಿಟ್ಟುಕೊಂಡ ತೊಗರಿಬೇಳೆ, ತಯಾರು ಮಾಡಿಕೊಂಡ ಪೌಡರ್ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಕುದಿಸಿದರೆ, ಮೈಸೂರು ಸಾರು ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com