ಆಲೂ ಸ್ಮೈಲ್ಸ್

ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಆಲೂ ಸ್ಮೈಲ್ಸ್ ಮಾಡುವ ವಿಧಾನ...
ಆಲೂ ಸ್ಮೈಲ್ಸ್
ಆಲೂ ಸ್ಮೈಲ್ಸ್
ಬೇಕಾಗುವ ಪದಾರ್ಥಗಳು
  • ಬೇಯಿಸಿದ ಆಲೂ ಗಡ್ಡೆ- 2 ಬಟ್ಟಲು
  • ಬ್ರೆಡ್ ಕ್ರಮ್ಬ್ಸ್- 1/4 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು 
  • ಕಾರ್ನ್ ಫ್ಲೋರ್ (ಜೋಳದ ಹಿಟ್ಟು)- 2 ಚಮಚ
  • ಅಚ್ಚ ಖಾರದ ಪುಡಿ- ಅರ್ಧ ಚಮಚ
  • ಎಣ್ಣೆ- ಕರಿಯಲು
ಮಾಡುವ ವಿಧಾನ...
  • ಬೇಯಿಸಿದ ಆಲೂಗಡ್ಡೆಯನ್ನು ನುಣ್ಣಗೆ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಬ್ರೆಡ್ ಕ್ರಮ್ಬ್ಸ್, ಉಪ್ಪು, ಕಾರ್ನ್ ಫ್ಲೋರ್, ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ನಂತರ ಇದು ತಣ್ಣಗಾಗಲು ಫ್ರಿಡ್ಜ್ ನಲ್ಲಿಟ್ಟು 30 ನಿಮಿಷ ಬಿಡಬೇಕು. 
  • ಫ್ರಿಡ್ಜ್ ನಿಂದ ತೆಗೆದ ಈ ಹಿಟ್ಟನ್ನು ಎರಡು ಭಾಗ ಮಾಡಿಕೊಂಡು ಒಂದೊಂದು ಭಾಗವನ್ನು ಮಂದಕ್ಕೆ ತಟ್ಟಬೇಕು. 
  • ನಂತರ ಸಣ್ಣ ಸಣ್ಣದಾಗಿ ವೃತ್ತಾಕಾರಕ್ಕೆ ಕತ್ತರಿಸಿಕೊಂಡು ವೃತ್ತಾಕಾರದ ಹಿಟ್ಟಿನ ಮೇಲೆ ಎರಡು ಬದಿಯಲ್ಲಿ ಒತ್ತಿ ಕಣ್ಣುಗಳು ಹಾಗೂ ಸ್ಪೂನ್ ನಿಂದ ಸ್ಮ್ಲೈಲ್ ಗಳನ್ನು ಮಾಡಿ ಸ್ಮೈಲಿ ಗೊಂಬೆಯಂತೆ ಅಲಂಕರಿಸಬೇಕು. ಬೇಕಾದ ಆಕಾರದಲ್ಲಿಯೂ ಕೂಡ ಅಲಂಕರಿಸಬಹುದು. 
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಚೆನ್ನಾಗಿ ಕಾದ ನಂತರ ಒಂದೊಂದಾಗಿ ಹಾಕಿ ಕೆಂಪಗೆ ಕರಿದರೆ, ರುಚಿಕರವಾದ ಆಲೂ ಸ್ಮೈಲ್ಸ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com