ಮೊದಲಿಗೆ ಗೋದಿ ಹಿಟ್ಟು, ಉಪ್ಪು, ನೀರು, ಎಣ್ಣೆ ಹಾಕಿ ಹಿಟ್ಟನ್ನು ತಯಾರು ಮಾಡಿಟ್ಟುಕೊಳ್ಳಬೇಕು. 20 ನಿಮಿಷ ನೆನೆಯಲು ಬಿಡಬೇಕು.
ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
ನಂತರ ಅಚ್ಚ ಖಾರದ ಪುಡಿ, ಅರಿಶಿನ, ಉಪ್ಪು, ಜೀರಿಗೆ ಪುಡಿ, ಹುಳಿ ಪುಡಿ, ಗರಂ ಮಸಾಲ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ದುಂಡಾಕಾರದಲ್ಲಿ ಲಟ್ಟಿಸಿ, ಮಧ್ಯೆ ಈಗಾಗಲೇ ತಯಾರು ಮಾಡಿಕೊಂಡ ಮಿಶ್ರಣವನ್ನು ಹಾಕಿ ಮತ್ತೆ ಚಪಾತಿಯಾಕಾರದಲ್ಲಿ ಲಟ್ಟಿಸಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಈರುಳ್ಳಿ ಪರೋಟ ಸವಿಯಲು ಸಿದ್ಧ.