ಕ್ಯಾರೆಟ್ ಕೀರು

ರುಚಿಕರವಾದ ಕ್ಯಾರೆಟ್ ಕೀರು ಮಾಡುವ ವಿಧಾನ...
ಕ್ಯಾರೆಟ್ ಕೀರು
ಕ್ಯಾರೆಟ್ ಕೀರು
ಬೇಕಾಗುವ ಪದಾರ್ಥಗಳು
  • ತುಪ್ಪ- ಸ್ವಲ್ಪ
  • ದ್ರಾಕ್ಷಿ, ಗೋಡಂಬಿ- ಸ್ವಲ್ಪ
  • ಕ್ಯಾರೆಟ್ ತುರಿ - 1.5 ಬಟ್ಟಲು
  • ಹಾಲು- 4 ಬಟ್ಟಲು
  • ಕೇಸರಿ- ಸ್ವಲ್ಪ
  • ಕೋವಾ - ಸ್ವಲ್ಪ
  • ಸಕ್ಕರೆ- ಮುಕ್ಕಾಲು ಬಟ್ಟಲು
  • ಏಲಕ್ಕಿ ಪುಡಿ - ಸ್ವಲ್ಪ
ಮಾಡುವ ವಿಧಾನ...
  • ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 1 ಚಮಚ ತುಪ್ಪವನ್ನು ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ.
  • ಬಾಣಲೆಯಲ್ಲಿ ಉಳಿದ ತುಪ್ಪದಲ್ಲಿಯೇ ಕ್ಯಾರೆಟ್ ತುರಿಯನ್ನು ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ.
  • ಪಾತ್ರೆಯೊಂದಕ್ಕೆ ಹಾಲು ಹಾಗೂ ಹುರಿದ ಕ್ಯಾರೆಟ್ ತುರಿಯನ್ನು ಹಾಕಿ ಚೆನ್ನಾಗಿ ಕುದಿಸಿ.
  • ಹಾಲು ಗಟ್ಟಿಯಾಗುತ್ತಿದ್ದಂತೆಯೇ ಇದಕ್ಕೆ ಕೇಸರಿ, ಕೋವಾ, ಸಕ್ಕರೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಡ್ರೈಫ್ರೂಟ್ಸ್ ನೊಂದಿಗೆ ಅಲಂಕರಿಸಿದರೆ, ರುಚಿಕರವಾದ ಕ್ಯಾರೆಟ್ ಕೀರು ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com