ವೆಜಿಟೆಬಲ್ ರೈಸ್ ಬಾತ್

ರುಚಿಕರವಾದ ವೆಜಿಟೆಬಲ್ ರೈಸ್ ಬಾತ್ ಮಾಡುವ ವಿಧಾನ...
ವೆಜಿಟೆಬಲ್ ರೈಸ್ ಬಾತ್
ವೆಜಿಟೆಬಲ್ ರೈಸ್ ಬಾತ್
ಬೇಕಾಗುವ ಪದಾರ್ಥಗಳು
  • ಎಣ್ಣೆ- 2-3 ಚಮಚ
  • ಪಲಾವ್ ಎಲೆ- 1 -2
  • ಚಕ್ಕೆ- ಸ್ವಲ್ಪ
  • ಲವಂಗ- 2-3 
  • ಏಲಕ್ಕಿ- 2 
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
  • ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 1-2
  • ಬೀನ್ಸ್- ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು 
  • ಕ್ಯಾರೆಟ್- ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
  • ಬಟಾಣಿ- 1 ಚಿಕ್ಕ ಬಟ್ಟಲು
  • ಬಾಸುಮತಿ ಅಕ್ಕಿ - 20 ನಿಮಿಷ ನೆನೆಸಿದ್ದು 1 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ನಿಂಬೆ ಹಣ್ಣಿನ ರಸ- 1 ಚಮಚ
  • ಕೊತ್ತಂಬರಿ ಸೊಪ್ಪು- ಸಣ್ಮಗೆ ಕತ್ತರಿಸಿದ್ದು ಸ್ವಲ್ಪ
ಮಾಡುವ ವಿಧಾನ...
  • ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ 2-3 ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ. ನಂತರ ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಚೆನ್ನಾಗಿ ಕಂಪಗೆ ಹುರಿದುಕೊಳ್ಳಬೇಕು. 
  • ನಂತರ ಬೀನ್ಸ್, ಕ್ಯಾರೆಟ್, ಬಟಾಣಿ, ಉಪ್ಪು ಹಾಗೂ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ 5 ನಿಮಿಷ ಬೇಯಿಸಿಕೊಳ್ಳಬೇಕು. 
  • ನಂತರ ನೆನೆಸಿದ ಅಕ್ಕಿ ಹಾಗೂ ಎರಡು ಬಟ್ಟಲು ನೀರು, ಹಾಕಿ 20 ನಿಮಿಷ ಬೇಯಿಸಿದರೆ, ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ, ರುಚಿಕರವಾದ ವೆಜಿಟೇಬರ್ ರೈಸ್ ಬಾತ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com