ಗೋಬಿ ಮಂಚೂರಿ ಗ್ರೇವಿ

ರುಚಿಕರವಾದ ಗೋಬಿ ಮಂಚೂರಿ ಗ್ರೇವಿ ಮಾಡುವ ವಿಧಾನ...
ಗೋಬಿ ಮಂಚೂರಿ ಗ್ರೇವಿ
ಗೋಬಿ ಮಂಚೂರಿ ಗ್ರೇವಿ
ಬೇಕಾಗುವ ಪದಾರ್ಥಗಳು...
  • ಮೈದಾಹಿಟ್ಟು- ಅರ್ಧ ಬಟ್ಟಲು
  • ಜೋಳದ ಹಿಟ್ಟು- 2 ಚಮಚ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಅಚ್ಚ ಖಾರದ ಪುಡಿ- 1 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಸೋಯಾ ಸಾಸ್- 1 ಚಮಚ
  • ಹೂಕೋಸು- 1 ಬಟ್ಟಲು
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಸ್ಪ್ರಿಂಗ್ ಆನಿಯನ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
  • ಕ್ಯಾಪ್ಸಿಕಂ- ಸ್ವಲ್ಪ
  • ಚಿಲ್ಲಿ ಸಾಸ್- 1 ಚಮಚ
  • ಟೊಮೆಟೋ ಸಾಸ್- 1 ಚಮಚ
  • ಸೋಯಾ ಸಾಸ್ - 1 ಚಮಚ
  • ವಿನೆಗರ್- 1 ಚಮಚ
  • ಕಾಳು ಮೆಣಸಿನ ಪುಡಿ- ಅರ್ಧ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ....
  • ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು, ಜೋಳದ ಹಿಟ್ಟು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅಚ್ಚ ಖಾರದ ಪುಡಿ, ಉಪ್ಪು, ಸೋಯಾ ಸಾಸ್ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ಹೂಕೋಸನ್ನು ಸಣ್ಣದಾಗಿ ಬಿಡಿಸಿಕೊಂಡು, ಚೆನ್ನಾಗಿ ತೊಳೆದುಕೊಳ್ಳಬೇಕೆ, ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. 
  • ನಂತರ ಹೂಕೋಸನ್ನು ಮೈದಾಹಿಟ್ಟಿನ ಮಸಾಲೆಯೊಂದಿಗೆ ಅದ್ದಿ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೂ ಕರಿದುಕೊಳ್ಳಿ. 
  • ಒಲೆಯ ಮೇಲೆ ಮತ್ತೊಂದು ಬಾಣಲೆಯಿಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ. ನಂತರ ಸಣ್ಣಗೆ ಹೆಚ್ಚಿಕೊಂಡ ಬೆಳ್ಳುಳ್ಳಿ, ಸ್ಪ್ರಿಂಗ್ ಆನಿಯನ್, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದಕ್ಕೆ ಚಿಲ್ಲಿ ಸಾಸ್, ಟೊಮೆಟೋ ಸಾಸ್, ಸೋಯಾ ಸಾಸ್, ವಿನೆಗರ್, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ.
  • ಬಟ್ಟಲಿಗೆ ಸ್ವಲ್ಪ ನೀರು ಹಾಗೂ ಜೋಳದ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕುದಿಯುತ್ತಿರುವ ಗ್ರೇವಿಯೊಂದಿಗೆ ಹಾಕಿ 5 ನಿಮಿಷ ಕುದಿಸಿ. ನಂತರ ಈಗಾಗಲೇ ಮಾಡಿಟ್ಟಿಕೊಂಡಿದ್ದ ಗೋಬಿಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಗೋಬಿ ಮಂಚೂರಿ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com