ಬೆಣ್ಣೆ ಚಕ್ಕುಲಿ

ರುಚಿಕರವಾದ ಬೆಣ್ಣೆ ಚಕ್ಕುಲಿ ಮಾಡುವ ವಿಧಾನ...
ಬೆಣ್ಣೆ ಚಕ್ಕುಲಿ
ಬೆಣ್ಣೆ ಚಕ್ಕುಲಿ
ಬೇಕಾಗುವ ಪದಾರ್ಥಗಳು
  • ಅಕ್ಕಿ ಹಿಟ್ಟು - 2 ಬಟ್ಟಲು
  • ಕಡಲೆಹಿಟ್ಟು - ಅರ್ಧ ಬಟ್ಟಲು
  • ಹುರಿಗಡಲೆ ಪುಡಿ - 2 ಚಮಚ
  • ಇಂಗು - ಚಿಟಿಕೆ
  • ಜೀರಿಗೆ - 1 ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ಬೆಣ್ಣೆ - 1-2 ಚಮಚ
  • ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ...
  • ಪಾತ್ರೆಯೊಂದರನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟು, ಕಡಲೆಹಿಟ್ಟು, ಹುರಿಗಡಲೆ ಪುಡಿ, ಜೀರಿಗೆ, ಇಂಗು, ಉಪ್ಪು, ಬೆಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನ
  • ನಂತರ ಸ್ವಲ್ಪ, ಸ್ವಲ್ಪವೇ ನೀರು ಹಾಕಿ ಹಿಟ್ಟನ್ನು ತಯಾರು ಮಾಡಿಕೊಳ್ಳಬೇಕು. 
  • ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು. 
  • ಬಳಿಕ ಚಕ್ಕುಲಿ ಒರಳಿಗೆ ಈ ಹಿಟ್ಟನ್ನು ಹಾಕಿ ಒತ್ತುತ್ತಾ ಎಣ್ಣೆಯಲ್ಲಿ ಬಿಡಬೇಕು. ಉರಿ ತುಂಬಾ ಜೋರಾಗಿ ಇಟ್ಟುಕೊಳ್ಳಬಾರದು. ಉರಿ ಜೋರಾಗಿದ್ದರೆ, ಚಕ್ಕುಲಿ ಚೆನ್ನಾಗಿ ಬೇಯುವುದಿಲ್ಲ, ಮಧ್ಯಮ ಉರಿಯಲ್ಲಿ ಕೆಂಪಗೆ ಕರಿದುಕೊಂಡರೆ ರುಚಿಕರವಾದ ಬೆಣ್ಣೆ ಮುರುಕು ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com