ಟೊಮೆಟೋ ಬಿರಿಯಾನಿ

ಟೊಮೆಟೋ ಬಿರಿಯಾನಿ ಮಾಡುವ ವಿಧಾನ...
ಟೊಮೆಟೋ ಬಿರಿಯಾನಿ
ಟೊಮೆಟೋ ಬಿರಿಯಾನಿ
ಬೇಕಾಗುವ ಪದಾರ್ಥಗಳು
  • ಪಲಾವ್ ಎಲೆ- 2-3
  • ಚಕ್ಕೆ - 2 
  • ಲವಂಗ - 5
  • ಏಲಕ್ಕಿ -  2 
  • ಮರಾಟಿ ಮೊಗ್ಗು - 1 
  • ಜೀರಿಗೆ - 1 ಚಮಚ
  • ಸೋಂಪು - 1 ಚಮಚ
  • ತುಪ್ಪ - 1 ಚಮಚ
  • ಈರುಳ್ಳಿ - 1 ಸಣ್ಣಗೆ ಹೆಚ್ಚಿದ್ದು
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
  • ಹಸಿಮೆಣಸಿನ ಕಾಯಿ - 2-3
  • ಟೊಮೆಟೊ - ರುಬ್ಬಿದ್ದು 1 ಬಟ್ಟಲು
  • ಅರಿಶಿನ - ಅರ್ಧ ಚಮಚ
  • ಅಚ್ಚ ಖಾರದ ಪುಡಿ - 1 ಚಮಚ
  • ಬಿರಿಯಾನಿ ಪುಡಿ - 1 ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ಕ್ಯಾರೆಟ್ - 1 ಸಣ್ಣ ಬಟ್ಟಲು 
  • ಬಟಾಣಿ - 1 ಸಣ್ಣ ಬಟ್ಟಲು 
  • ಪುದೀನಾ - ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಕೊತ್ತಂಬರಿ ಸೊಪ್ಪು - ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ತೆಂಗಿನ ಕಾಯಿ ಹಾಲು - 1 ಬಟ್ಟಲು
  • ಅಕ್ಕಿ - ಬಟ್ಟಲು
ಮಾಡುವ ವಿಧಾನ...
  • ಮೊದಲು ಕುಕ್ಕರ್ ತೆಗೆದುಕೊಂಡು ಅದಕ್ಕೆ 1 ಚಮಚ ತುಪ್ಪ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಮರಾಟಿ ಮೊಗ್ಗು, ಜೀರಿಗೆ, ಸೋಂಪು, ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
  • ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ರುಬ್ಬಿಕೊಂಡ ಟೊಮೆಟೋ ಹಾಕಿ ಚೆನ್ನಾಗಿ ಎಣ್ಣೆ ಪ್ರತ್ಯೇಕ ಗೊಳ್ಳುವವರೆಗೂ ಕೈಯಾಡಿಸಬೇಕು. 
  • ಬಳಿಕ ಅರಿಶಿನದ ಪುಡಿ, ಅಚ್ಚ ಖಾರದ ಪುಡಿ, ಬಿರಿಯಾನಿ ಪುಡಿ, ಉಪ್ಪು, ಕ್ಯಾರೆಟ್, ಬಟಾಣಿ, ಪುದೀನಾ, ಕೊತ್ತಂಬರಿ ಸೊಪ್ಪು, ತೆಂಗಿನ ಕಾಯಿ ಹಾಲು, ನೀರು ಒಂದು ಬಟ್ಟಲು, ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳವನ್ನು ಹಾಕಿ 2-3 ಕೂಗು ಬಂದ ಬಳಿಕ ತೆಗೆದರೆ ರುಚಿಕರವಾದ ಟೊಮೆಟೋ ಬಿರಿಯಾನಿ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com