ಸಬ್ಬಕ್ಕಿ ಸಂಡಿಗೆ

ರುಚಿಕರವಾದ ಸಬ್ಬಕ್ಕಿ ಸಂಡಿಗೆ ಮಾಡುವ ವಿಧಾನ...
ಸಬ್ಬಕ್ಕಿ ಸಂಡಿಗೆ
ಸಬ್ಬಕ್ಕಿ ಸಂಡಿಗೆ
ಬೇಕಾಗುವ ಪದಾರ್ಥಗಳು
  • ಸಬ್ಬಕ್ಕಿ- 1 ಬಟ್ಟಲು
  • ಹಸಿ ಮೆಣಸಿನ ಕಾಯಿ ಪೇಸ್ಟ್ - 1 ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ನಿಂಬೆ ಹಣ್ಣಿನ ರಸ - 1 ಚಂಚ
  • ಇಂಗು- ಚಿಟಿಕೆಯಷ್ಟು
  • ಜೀರೆಗ - 2 ಚಮಚ
ಮಾಡುವ ವಿಧಾನ...
  • ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಯಲು ಬಿಡಬೇಕು. 
  • ಒಲೆಯ ಮೇಲೆ ಪಾತ್ರೆಯನ್ನು ಇಟ್ಟು, ಅದಕ್ಕೆ ಸಬ್ಬಕ್ಕಿ, ನಾಲ್ಕು ಬಟ್ಟಲು ನೀರು, ಹಸಿ ಮೆಣಸಿನ ಕಾಯಿ ಪೇಸ್ಟ್, ಉಪ್ಪು ಹಾಕಿ 10 ನಿಮಿಷ ಬೇಯಿಸಬೇಕು. ಆಗಾಗ ಕೈಯಾಡಿಸುತ್ತಿರಬೇಕು. 
  • ಮತ್ತೆ 10 ನಿಮಿಷ ಬೇಯಿಸಿ, ಉರಿಯನ್ನು ಆರಿಸಿ ಅದಕ್ಕೆ ಇಂಗು, ಜೀರಿಗೆ, ನಿಂಬೆ ಹಣ್ಣಿನ ರಸವನ್ನು ಹಾಕಿ 10 ನಿಮಿಷ ತಣ್ಣಗಾಗಲು ಬಿಡಬೇಕು. 
  • ಈ ಮಿಶ್ರಣ ಗಟ್ಟಿಗಾದ ಬಳಿಕ ಒಂದು ಪ್ಲೇಟ್ ಮೇಲೆ ಕಾಟನ್ ಬಟ್ಟೆಯನ್ನು ಹಾಕಿ, ಒಂದೊಂದೇ ಚಮಚದಷ್ಟು ಹಿಟ್ಟನ್ನು ವೃತ್ತಾಕಾರಕ್ಕೆ ಹಾಕಿ. ಬಿಸಿಲಿನಲ್ಲಿ 2 ದಿನ ಒಣಗಿಸಿ, ಡಬ್ಬಿಗೆ ಹಾಕಿಟ್ಟು, ಬೇಕೆನಿಸಿದಾಗ ಕಾದ ಎಣ್ಣೆಗೆ ಹಾಕಿ ಕರಿದರೆ ರುಚಿಕರವಾದ ಸಬ್ಬಕ್ಕಿ ಸಂಡಿಗೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com