ಹನಿ ಚಿಲ್ಲಿ ಪೊಟಾಟೋ

ರುಚಿಕರವಾದ ಹನಿ ಚಿಲ್ಲಿ ಪೊಟಾಟೋ ಮಾಡುವ ವಿಧಾನ...
ಹನಿ ಚಿಲ್ಲಿ ಪೊಟಾಟೋ
ಹನಿ ಚಿಲ್ಲಿ ಪೊಟಾಟೋ
ಬೇಕಾಗುವ ಪದಾರ್ಥಗಳು...
  • ಆಲೂಗಡ್ಡೆ - 2 ಬಟ್ಟಲು
  • ಕಾರ್ನ್ ಫ್ಲೋರ್- 2 ಚಮಚ
  • ಕಾಳು ಮೆಣಸಿನ ಪುಡಿ - ಅರ್ಧ ಚಮಚ
  • ಎಣ್ಣೆ- ಅಗತ್ಯಕ್ಕನುಗುಣವಾಗಿ
  • ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು
  • ಹಸಿಮೆಣಸಿನ ಕಾಯಿ - ಸಣ್ಣಗೆ ಹೆಚ್ಚಿದ್ದು 2-3
  • ಸ್ಪ್ರಿಂಗ್ ಆನಿಯನ್ - ಸ್ವಲ್ಪ
  • ಈರುಳ್ಳಿ- 1-2
  • ಕ್ಯಾಪ್ಸಿಕಂ- 1
  • ಟೊಮೆಟೋ ಸಾಸ್ - 1 ಚಮಚ
  • ಸೋಯಾ ಸಾಸ್ - 2 ಚಮಚ
  • ವಿನೆಗರ್ - 1 ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ಜೇನು ತುಪ್ಪ - 1 ಚಮಚ
ಮಾಡುವ ವಿಧಾನ...
  • ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಉದ್ದುದ್ದಕ್ಕೆ ಹಾಗೂ ಸ್ವಲ್ಪ ದಪ್ಪದಾಗಿ ಕತ್ತರಿಸಬೇಕು. 
  • ಒಲೆಯ ಮೇಲೆ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಇಟ್ಟು, ನೀರು ಕುದಿಯುತ್ತಿರುವ ಸಂದರ್ಭದಲ್ಲಿ ಆಲೂಗಡ್ಡೆ ಹಾಗೂ ಸ್ವಲ್ಪ ಉಪ್ಪು ಹಾಕಿ 2 ನಿಮಿಷ ಬೇಯಿಸಿ, ನೀರಿನಿಂದ ಆಲೂಗಡ್ಡೆಯನ್ನು ತೆಗೆದುಕೊಳ್ಳಬೇಕು.
  • ನಂತರ ಬಟ್ಟಲಿಗೆ ಕಾರ್ನ್ ಫ್ಲೋರ್, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ನಂತರ ಒಲೆಯ ಮೇಲೆ ಬಾಣಲೆಗೆ ಎಣ್ಣೆಯನ್ನು ಹಾಕಿ, ಕಾದ ನಂತರ ಮಿಶ್ರಣ ಮಾಡಿಕೊಂಡ ಆಲೂಗಡ್ಡೆಯನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. 
  • ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಕಾದ ನಂತರ ಶುಂಠಿ, ಬೆಳ್ಳುಳ್ಳು, ಹಸಿಮೆಣಸಿನ ಕಾಯಿ, ಈರುಳ್ಳು, ಕ್ಯಾಪ್ಸಿಕಂ, ಟೊಮೆಟೋ ಸಾಸ್, ಸೋಯಾ ಸಾಸ್, ವಿನೆಗರ್, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 
  • ನಂತರ ಅರ್ಧ ಚಮಚದಷ್ಟು ಕಾರ್ನ್ ಫ್ಲೋರ್ ಜೊತೆಗೆ ನೀರನ್ನು ಮಿಶ್ರಣ ಮಾಡಿ ಮಸಾಲೆಗೆ ಹಾಕಿ, 2 ನಿಮಿಷ ಬೇಯಲು ಬಿಡ್ಡು, ಈಗಾಗಲೇ ಫ್ರೈ ಮಾಡಿಕೊಂಡ ಆಲೂಗಡ್ಡೆಗಳ, ಜೇನುತುಪ್ಪ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ, ಕೊನೆಯಲ್ಲಿ ಸ್ಪ್ರಿಂಗ್ ಆನಿಯನ್ ಹಾಕಿ ಅಲಂಕರಿಸಿದರೆ ರುಚಿಕರವಾದ ಹನಿ ಚಿಲ್ಲಿ ಪೊಟಾಟೋ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com