ಚಪಾತಿ ನೂಡಲ್ಸ್

ರುಚಿಕರವಾದ ಚಪಾತಿ ನೂಡಲ್ಸ್ ಮಾಡುವ ವಿಧಾನ...
ಚಪಾತಿ ನೂಡಲ್ಸ್
ಚಪಾತಿ ನೂಡಲ್ಸ್
ಬೇಕಾಗುವ ಪದಾರ್ಥಗಳು
  • ಗೋದಿ ಹಿಟ್ಟು - 1 ಬಟ್ಟಲು
  • ಎಣ್ಣೆ- ಅಗತ್ಯಕ್ಕನುಗುಣವಾಗಿ
  • ಉಪ್ಪು- ರುಚಿಗೆ ತಕ್ಕಷ್ಟು
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ
  • ಹಸಿ ಮೆಣಸಿನ ಕಾಯಿ - 1-2
  • ಈರುಳ್ಳಿ - ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
  • ಸ್ಪ್ರಿಂಗ್ ಆನಿಯನ್ - ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
  • ಕ್ಯಾರೆಟ್ - ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
  • ಎಲೆಕೋಸು- ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
  • ಕ್ಯಾಪ್ಸಿಕಂ- ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
  • ಸೋಯಾ ಸಾಸ್ - 1 ಚಮಚ
  • ವಿನೆಗರ್ - 1 ಚಮಚ
  • ಟೊಮೆಟೋ ಸಾಸ್ - 2 ಚಮಚ
ಮಾಡುವ ವಿಧಾನ...
  • ಚಪಾತಿ ಹಿಟ್ಟನ್ನು ಉಪ್ಪು, ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಚಪಾತಿ ಹಿಟ್ಟನ್ನು ತಯಾರಿಸಿಟ್ಟುಕೊಳ್ಳಬೇಕು. 
  • ನಂತರ ಸ್ವಲ್ಪ ದಪ್ಪದಾಗಿರುವಂತೆ ಚಪಾತಿಯನ್ನು ಲಟ್ಟಿಸಿಕೊಂಡು, ಎರಡೂ ಬದಿಯಲ್ಲು ಕೆಂಪಗೆ ಸುಟ್ಟು, ಚಪಾತಿಯನ್ನು ತಯಾರಿಸಿಕೊಳ್ಳಬೇಕು. 
  • ನಂತರ ಚಪಾತಿಗಳನ್ನು ಒಂದೊಂದಾಗಿ ರೋಲ್ ಮಾಡಿಕೊಂಡು ತುದಿಯಲ್ಲಿ ಚಾಕುವಿನಿಂದ ಕತ್ತರಿಸಿಕೊಂಡು ನೂಡಲ್ಸ್ ತಯಾರಿಸಿಕೊಳ್ಳಬೇಕು. 
  • ಒಲೆಯ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಅದು ಕಾದ ನಂತರ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಸ್ಪ್ರಿಂಗ್ ಆನಿಯನ್, ಕ್ಯಾಪ್ಸಿಕಂ, ಕ್ಯಾರೆಟ್, ಎಲೆಕೋಸು, ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
  • ಬಳಿಕ ಇದಕ್ಕೆ ಸೋಯಾಸಾಸ್, ಟೊಮೆಟೋ ಸಾಸ್, ವಿನೆಗರ್ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಈ ಮೊದಲೆ ತಯಾರಿಸಿದ ಚಪಾತಿ ನೂಡಲ್ಸ್'ನ್ನು ಇದಕ್ಕೆ ಮಿಶ್ರಣ ಮಾಡಿದರೆ, ರುಚಿಕರವಾದ ಚಪಾತಿ ನೂಡಲ್ಸ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com