ರವೆ ಪನಿಯಾರ

ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ರವೆ ಪನಿಯಾರ ಮಾಡುವ ವಿಧಾನ...
ರವೆ ಪನಿಯಾರ
ರವೆ ಪನಿಯಾರ
ಬೇಕಾಗುವ ಪದಾರ್ಥಗಳು
  • ಸಣ್ಣ ರವೆ - 1 ಬಟ್ಚಲು
  • ಮೊಸರು - 3/4 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಸ್ವಲ್ಪ
  • ಈರುಳ್ಳಿ - ಸಣ್ಣಗೆ ಹೆಚ್ಚಿದ್ದು 2-3
  • ಹಸಿಮೆಣಸಿನ ಕಾಯಿ - ಸಣ್ಣಗೆ ಹೆಚ್ಚಿದ್ದು 3-4
  • ಕೊತ್ತಂಬರಿ ಸೊಪ್ಪು - ಸಣ್ಣಗೆ ಹೆಚ್ಚಿದ್ದು ಸ್ವಲ್ಬ
  • ಕಾಯಿ ತುರಿ - ಸ್ವಲ್ಪ
  • ಕ್ಯಾರೆಟ್ ತುರಿ ಸ್ವಲ್ಪ
  • ಬೇಕಿಂಗ್ ಸೋಡಾ - ಸ್ವಲ್ಪ
ಮಾಡುವ ವಿಧಾನ...
  • ಪಾತ್ರೆಯೊಂದಕ್ಕೆ ಸಣ್ಣರವೆ, ಉಪ್ಪು, ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಒಂದು ಬಟ್ಟಲು ನೀರು ಹಾಕಿ ಮಿಶ್ರಣ ಗಟ್ಟಿಯಿರುವಂತೆ ಕಲಸಿಕೊಳ್ಳಬೇಕು. 
  • ಬಳಿಕ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಹಸಿಮೆಣಸಿನ ಕಾಯಿ ಈರುಳ್ಳಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಕೊತ್ತಂಬರಿ ಸೊಪ್ಪು, ಕ್ಯಾರೆಂಟ್, ತೆಂಗಿನ ತುರಿ ಹಾಕಿ ಹುರಿದುಕೊಂಡು. ಇದನ್ನು ಈಗಾಗಲೇ ತಯಾರಿಸಿಟ್ಟುಕೊಂಡ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 20 ನಿಮಿಷ ನೆನೆಯಲು ಬಿಡಬೇಕು. 
  • ನಂತರ ಪನಿಯಾರ ಮಾಡುವ ತವವನ್ನು ಒಲೆಯ ಮೇಲಿಟ್ಟು ಚಮಚದಲ್ಲಿ ಒಂದೊಂದೇ ಹೊರಳಿಗೆ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲು ಚಿನ್ನದ ಬಣ್ಣ ಬರುವವರೆಗೆ ಬೇಯಿಸಿದರೆ, ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ರವೆ ಪನಿಯಾರ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com