ಗೋಬಿ ಚಿಲ್ಲಿ

ರುಚಿಕರವಾದ ಗೋಬಿ ಚಿಲ್ಲಿ ಮಾಡುವ ವಿಧಾನ...
ಗೋಬಿ ಚಿಲ್ಲಿ
ಗೋಬಿ ಚಿಲ್ಲಿ
ಬೇಕಾಗುವ ಪದಾರ್ಥಗಳು
  • ಮೈದಾಹಿಟ್ಟು- ಅರ್ಧ ಬಟ್ಟಲು
  • ಜೋಳದ ಹಿಟ್ಟು- ಮುಕ್ಕಾಲು ಬಟ್ಟಲು
  • ಅಚ್ಚ ಖಾರದ ಪುಡಿ - ಅರ್ಧ ಚಮಚ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಹೂಕೋಸು- ಬಿಡಿಸಿದ್ದು 1 ಬಟ್ಟಲು
  • ಎಣ್ಣೆ - ಕರಿಯಲು ಅಗತ್ಯವಿದ್ದಷ್ಟು
  • ಕ್ಯಾಪ್ಸಿಕಂ- ಕೆಂಪು, ಹಸಿರು 2
  • ಈರುಳ್ಳಿ - 1
  • ಸ್ಪ್ರಿಂಗ್ ಆನಿಯನ್ - ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಟೊಮೆಟೋ ಸಾಸ್ - 1 ಚಮಚ
  • ಚಿಲ್ಲಿ ಸಾಸ್ - 1 ಚಮಚ
  • ಸೋಯಾ ಸಾಸ್ - 1 ಚಮಚ
ಮಾಡುವ ವಿಧಾನ...
  1. ಮೊದಲು ಒಂದು ಪಾತ್ರೆಗೆ ಮೈದಾ ಹಿಟ್ಟು, ಜೋಳದ ಹಿಟ್ಟು, ಉಪ್ಪು, ಖಾರದ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು, ಹೂಕೋಸನ್ನು ಹಾಕಿ 10 ನಿಮಿಷ ನೆನೆಯಲು ಬಿಡಬೇಕು. 
  2. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಬೇಕು. ನಂತರ ಹೂಕೋಸನ್ನು ಒಂದಾಂದಾಗಿ ತೆಗೆದುಕೊಂಡು ಕಾದ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೂ ಕರಿಯಬೇಕು. 
  3. ನಂತರ ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಬೇಕು. ನಂತರ ಇದಕ್ಕೆ ಸಣ್ಣಗೆ ಹೆಚ್ಚಿಕೊಂಡ ಶುಂಠಿ, ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿದ ಹಸಿ ಮೆಣಿಸಿನ ಕಾಯಿ 1, ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ ಸ್ವಲ್ಪ ಹಾಕಿ ಚೆನ್ನಾಗಿ ಉರಿಯಬೇಕು. 
  4. ಬಳಿಕ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಉರಿಯಬೇಕು. ನಂತರ ಟೊಮೆಟೋ ಸಾಸ್, ಚಿಲ್ಲಿ ಸಾಸ್, ಸೋಯಾ ಸಾಸ್ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಸ್ವಲ್ಪ ನೀರಿಗೆ ಜೋಳದ ಹಿಟ್ಟನ್ನು ಮಿಶ್ರಣ ಮಾಡಿಕೊಂಡು ಅದನ್ನು ಈ ಮಸಾಲೆಗೆ ಹಾಕಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ, ಕೊನೆಯಲ್ಲಿ ಈಗಾಗಲೇ ಎಣ್ಣೆಯಲ್ಲಿ ಕರಿದಿಟ್ಟುಕೊಂಡ ಗೋಬಿಯನ್ನು ಇದಕ್ಕೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಗೋಬಿ ಚಿಲ್ಲಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com