ಸ್ಟ್ರಾಬೆರ್ರಿ ಜಾಮ್

ರುಚಿಕರವಾದ ಸ್ಟ್ರಾಬೆರ್ರಿ ಜಾಮ್ ಮಾಡುವ ವಿಧಾನ...
ಸ್ಟ್ರಾಬೆರ್ರಿ ಜಾಮ್
ಸ್ಟ್ರಾಬೆರ್ರಿ ಜಾಮ್
ಬೇಕಾಗುವ ಪದಾರ್ಥಗಳು...
  • ಸ್ಟ್ರಾಬೆರ್ರಿ - 750 ಗ್ರಾಂ
  • ಸಕ್ಕರೆ - ಒಂದು ಬಟ್ಟಲು
  • ನಿಂಬೆಹಣ್ಣಿನ ರಸ - ಅರ್ಧ ಹೋಳಿನಷ್ಟು
ಮಾಡುವ ವಿಧಾನ...
  • ಸ್ಟ್ರಾಬೆರ್ರಿ ಹಣ್ಣುಗಳನ್ನು ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. 
  • ಒಲೆಯ ಮೇಲೆ ಬಾಣಲೆಯಿದ್ದು ಕಾದ ನಂತರ ಸ್ಟ್ರಾಬೆರ್ರಿಗಳನ್ನು ಹಾಕಿ, ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ನಂತರ ಸಕ್ಕರೆ ಕರಗುವವರೆಗೂ ಕೈಯಾಡಿಸಿ, ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ಹೀಗೆ ಐದು ನಿಮಿಷಗಳ ಕಾಲ ಕೈಯಾಡಿಸಿದ ಬಳಿಕ, ಸಕ್ಕರೆಯಲ್ಲಿ ಬೆಂದ ಸ್ಟ್ರಾಬೆರ್ರಿಗಳನ್ನು ಚಮಚದಲ್ಲಿಯೇ ಚೆನ್ನಾಗಿ ಪೇಸ್ಟ್ ಮಾಡಿ, 10 ನಿಮಿಷಗಳ ಕಾಲ ಕೈಯಾಡಿಸುತ್ತಾ ಒಲೆಯ ಮೇಲೆಯೇ ಬಿಡಬೇಕು. 
  • ತಣ್ಣಗಾದ ಬಳಿಕ ಗಾಜಿನ ಬಾಟಲಿಯಲ್ಲಿ ಹಾಕಿಟ್ಟುಕೊಂಡರೆ, ರುಚಿಕರವಾದ ಸ್ಟ್ರಾಬೆರ್ರಿ ಜಾಮ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com