ಬೀಟ್ ರೂಟ್ ದಾಲ್

ರುಚಿಕರ ಹಾಗೂ ಆರೋಗ್ಯಕರವಾದ ಬೀಟ್ ರೂಟ್ ದಾಲ್ ಮಾಡುವ ವಿಧಾನ...
ಬೀಟ್ ರೂಟ್ ದಾಲ್
ಬೀಟ್ ರೂಟ್ ದಾಲ್
ಬೇಕಾಗುವ ಪದಾರ್ಥಗಳು...
  • ತೊಗರಿ ಬೇಳೆ- 10-12 ಚಮಚ
  • ಹಸಿರುಕಾಳು - 4-5 ಚಮಚ
  • ಉದ್ದಿನ ಬೇಳೆ- 3 ಚಮಚ
  • ಬೀಟ್ ರೂಟ್- 2 
  • ಉಪ್ಪು- ರುಚಿಗೆ ತಕ್ಕಷ್ಟು
  • ಅಚ್ಚಖಾರದ ಪುಡಿ - ಸ್ವಲ್ಪ
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ -ಸ್ವಲ್ಪ
  • ದನಿಯಾ ಪುಡಿ- ಸ್ವಲ್ಪ
  • ಚಕ್ಕೆ, ಲವಂಗ ಪುಡಿ - ಸ್ವಲ್ಪ
  • ಹಸಿ ಮೆಣಸಿನ ಕಾಯಿ - ಸಣ್ಣಗೆ ಹೆಚ್ಚಿದ್ದು 4 
  • ತುಪ್ಪ- 1 ಚಮಚ
  • ಜೀರಿಗೆ - ಅರ್ಧ ಚಮಚ
  • ಕರಿಬೇವಿನ ಸೊಪ್ಪು - ಸ್ವಲ್ಪ
ಮಾಡುವ ವಿಧಾನ...
  • ಮೊದಲಿಗೆ ಕುಕ್ಕರ್ ಒಲೆಯ ಮೇಲಿಟ್ಟು ಅದಕ್ಕೆ ತೊಳೆದ ಬೇಳೆಯನ್ನು ಹಾಕಬೇಕು. ನಂತರ ಬೀಟ್ ರೂಟ್ ಗಳನ್ನು ಎರಡು ಭಾಗ ಮಾಡಿ ಹಾಕಬೇಕು. 
  • ಬಳಿಕ ಉಪ್ಪು, ಅಚ್ಚಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ದನಿಯಾ ಪುಡಿ, ಚಕ್ಕೆ, ಲವಂಗ ಪುಡಿ, ಹಸಿ ಮೆಣಸಿನಕಾಯಿ ಎಲ್ಲವನ್ನೂ ಹಾಕಿ 3 ಕೂಗು ಕೂಗಿಸಿಕೊಳ್ಳಬೇಕು. 
  • ನಂತರ ಬೇಯಿಸಿಕೊಂಡ ಬೀಟ್ ರೂಟ್ ಗಳನ್ನು ತೆಗೆದು ನುಣ್ಣಗೆ ಮಾಡಿಕೊಂಡು, ಬಳಿಕ ಬೇಯಿಸಿಕೊಂಡ ಮಸಾಲೆಯೊಂದಿಗೆ ಮಿಶ್ರಣ ಮಾಡಬೇಕು. 
  • ಸಣ್ಣ ಪ್ಯಾನ್ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ. ಕಾದ ನಂತರ ಜೀರಿಗೆ ಹಾಗೂ ಕರಿಬೇವನ್ನು ಕೆಂಪಗೆ ಹುರಿದುಕೊಂಡು ಮಿಶ್ರಣ ಮಾಡಿದರೆ, ರುಚಿಕರವಾದ ಬೀಟ್ ರೂಟ್ ದಾಲ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com