ಪಾಲಾಕ್ ಪಕೋಡಾ

ರುಚಿಕರವಾದ ಪಾಲಾಕ್ ಪಕೋಡಾ ಮಾಡುವ ವಿಧಾನ...
ಪಾಲಾಕ್ ಪಕೋಡಾ
ಪಾಲಾಕ್ ಪಕೋಡಾ
ಬೇಕಾಗುವ ಪದಾರ್ಥಗಳು...
  • ಕಡಲೆ ಹಿಟ್ಟು- 1 ಬಟ್ಟಲು
  • ಅಕ್ಕಿ ಹಿಟ್ಟು- 2 ಚಮಚ
  • ಅರಿಶಿಣದ ಪುಡಿ- ಕಾಲು ಚಮಚ
  • ಅಚ್ಚ ಖಾರದ ಪುಡಿ- ಮುಕ್ಕಾಲು ಚಮಚ
  • ಓಂ ಕಾಳು- ಕಾಲು ಚಮಚ
  • ಇಂಗು- ಚಿಟಿಕೆ
  • ಉಪ್ಪು- ರುಚಿಗೆ ತಕ್ಕಷ್ಟು
  • ಅಡುಗೆ ಸೋಡಾ- ಕಾಲು ಚಮಚ
  • ಪಾಲಾಕ್ ಸೊಪ್ಪಿನ ಎಲೆ- 10-15
  • ಎಣ್ಣೆ- ಅಗತ್ಯಕ್ಕನುಗುಣವಾಗಿ
ಮಾಡುವ ವಿಧಾನ...
  • ಮೊದಲಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟನ್ನು ಮಿಶ್ರಣ ಮಾಡಿಕೊಂಡು ಅದಕ್ಕೆ ಅರಿಶಿಣದ ಪುಡಿ, ಅಚ್ಚ ಖಾರದ ಪುಡಿ, ಓಂ ಕಾಳು, ಇಂಗು, ಉಪ್ಪು, ಅಡುಗೆ ಸೋಡಾ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ನಂತರ ಸ್ವಲ್ಪ, ಸ್ವಲ್ಪವೇ ನೀರಿ ಹಾಕಿ ಹಿಟ್ಟನ್ನು ಗಟ್ಟಿಯಾಗಿ ಕಲಸಿಕೊಳ್ಳಬೇಕು. 
  • ಪಾಲಾಕ್ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ಒರೆಸಿಟ್ಟುಕೊಳ್ಳಬೇಕು. 
  • ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡುಬೇಕು. ಎಣ್ಣೆ ಕಾದ ನಂತರ ಪಾಲಾಕ್ ಎಲೆಗಳನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಬಿಟ್ಟು, ಕೆಂಪಗೆ ಕರಿದರೆ ರುಚಿಕರವಾದ ಪಾಲಾಕ್ ಪಕೋಡಾ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com