ಮ್ಯಾಗಿ ಬೇಲ್

ರುಚಿಕರವಾದ ಮ್ಯಾಗಿ ಬೇಲ್ ಮಾಡುವ ವಿಧಾನ...
ಮ್ಯಾಗಿ ಬೇಲ್
ಮ್ಯಾಗಿ ಬೇಲ್
ಬೇಕಾಗುವ ಪದಾರ್ಥಗಳು...
  • ಮ್ಯಾಗಿ ನೂಡಲ್ಸ್- 2 ಪ್ಯಾಕೆಟ್
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
  • ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1 ಚಿಕ್ಕ ಬಟ್ಟಲು
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಆಲೂಗಡ್ಡೆ- ಬೇಯಿಸಿ ಸಣ್ಣ ಸಣ್ಣ ತುಂಡುಗಳಾಗಿ ಮಾಡಿದ್ದು 1 ಬಟ್ಟಲು
  • ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 2-3
  • ಸೇವ್ - ಸ್ವಲ್ಪ
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಕಡಲೆಬೀಜ- ಸ್ವಲ್ಪ
  • ಟೊಮೆಟೋ ಕೆಚಪ್- 3 ಚಮಚ
ಮಾಡುವ ವಿಧಾನ...
  • ಮೊದಲಿಗೆ ಮ್ಯಾಗಿಯನ್ನು ಪ್ಯಾಕೆಟ್ ನಿಂದ ತೆಗೆದು, ಮ್ಯಾಗಿಯನ್ನು ಪುಡಿ ಮಾಡದೆ ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಬೇಕು. 
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಕೆಂಪಗೆ ಹುರಿದಿಟ್ಟುಕೊಳ್ಳಬೇಕು. ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಕಡಲೆಬೀಜವನ್ನು ಚೆನ್ನಾಗಿ ಹುರಿದುಕೊಳ್ಳಬೇಕು. 
  • ಪಾತ್ರೆಯೊಂದಕ್ಕೆ ಟೊಮೆಟೋ ಕೆಚಪ್, ಮ್ಯಾಗಿಯಲ್ಲಿ ಬಂದ ಮಸಾಲೆ ಪುಡಿಯನ್ನು ಹಾಕಿ ಕೆಚಪ್ ಜೊತೆಗೆ ಚೆನ್ನಾಗಿ ಮಿಶ್ರಣ ಮಾಡಬೇಕು. 
  • ನಂತರ ಇದಕ್ಕೆ ಈರುಳ್ಳಿ, ಟೊಮೆಟೋ, ಕೊತ್ತಂಬರಿ ಸೊಪ್ಪು, ಆಲೂಗಡ್ಡೆ ಚೂರುಗಳು, ಹಸಿಮೆಣಸಿನ ಕಾಯಿ, ಹುರಿದ ಕಡಲೆಕಾಯಿ ಬೀಜ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಹುರಿದಿಟ್ಟುಕೊಂಡ ಮ್ಯಾಗಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸೇವ್'ನ್ನೇ ಮೇಲೆ ಉದುರಿಸಿದರೆ, ರುಚಿಕರಕವಾದ ಮ್ಯಾಗಿ ಬೇಲ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com