ಆಲೂ ಬಟನ್ಸ್

ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಆಲೂ ಬಟನ್ಸ್ ಮಾಡುವ ವಿಧಾನ...
ಆಲೂ ಬಟನ್ಸ್
ಆಲೂ ಬಟನ್ಸ್
ಬೇಕಾಗುವ ಪದಾರ್ಥಗಳು
  • ಜೀರಿಗೆ- 1-2 ಚಮಚ
  • ಸಣ್ಣ ರವೆ - ಒಂದು ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಕರಿಯಲು
  • ಬೇಯಿಸಿದ ಆಲೂಗಡ್ಡೆ- 1 ಬಟ್ಟಲು
  • ಅಚ್ಚ ಖಾರದ ಪುಡಿ - 1 ಚಮಚ
  • ಕಾಳು ಮೆಣಸಿನ ಪುಡಿ - 1 ಚಮಚ
  • ಗರಂ ಮಸಾಲೆ ಪುಡಿ - 1 ಚಮಚ
  • ಎಳ್ಳು- 1 ಚಮಚ
ಮಾಡುವ ವಿಧಾನ...
  • ಮೊದಲು ಒಲೆಯ ಮೇಲೇ ಬಾಣಲೆ ಇಟ್ಟು ಅದಕ್ಕೆ 2 ಬಟ್ಟಲಿನಷ್ಟು ನೀರು, ಜೀರಿಗೆ, 1 ಚಮಚ ಎಣ್ಣೆ, ಹುರಿದಿಟ್ಟುಕೊಂಡ ರವೆ, ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಇದು ಉಪ್ಪಿಟ್ಟಿನ ಹಾಗೆ ಗಟ್ಟಿಯಾದ ಬಳಿಕ ಒಲೆಯ ಮೇಲಿಂದ ಇಳಿಸಬೇಕು. 
  • ನಂತರ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಬೇಯಿಸಿದ ಆಲೂಗಡ್ಡೆಯನ್ನು ನುಣ್ಣಗೆ ಮಾಡಿಕೊಂಡು ಈ ಹಿಂದೆ ಮಾಡಿಕೊಂಡ ಹಿಟ್ಟನ್ನು ಇದಕ್ಕೆ ಹಾಕಿ, ಅಚ್ಚ ಖಾರದ ಪುಡಿ, ಕಾಳು ಮೆಣಸಿನ ಪುಡಿ, ಗರಂ ಮಸಾಲೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ 1 ಚಮಚ ಎಣ್ಣೆ ಹಾಕಿ ಹಿಟ್ಟನ್ನು ಮತ್ತೆ ಮಿಶ್ರಣ ಮಾಡಿಕೊಳ್ಳಬೇಕು. 
  • ನಂತರ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಅದರ ಮೇಲೆ ಕಪ್ಪು ಎಳ್ಳನ್ನು ಸ್ವಲ್ಪ ಉದುರಿಸಿಟ್ಟುಕೊಳ್ಳಬೇಕು. 
  • ಬಾಣಲೆಗೆ ಎಣ್ಣೆ ಹಾಕಿ, ಚೆನ್ನಾಗಿ ಕಾದ ಬಳಿಕ ಈ ಉಂಡೆಗಳನ್ನು ಹಾಕಿ ಕೆಂಪಗೆ ಕರಿದರೆ ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಆಲೂ ಬಟನ್ಸ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com