ಉಡುಪಿ ಶೈಲಿ ಹಯಗ್ರೀವ

ರುಚಿಕರವಾದ ಉಡುಪಿ ಶೈಲಿ ಹಯಗ್ರೀವ ಮಾಡುವ ವಿಧಾನ...
ಉಡುಪಿ ಶೈಲಿ ಹಯಗ್ರೀವ
ಉಡುಪಿ ಶೈಲಿ ಹಯಗ್ರೀವ
ಬೇಕಾಗುವ ಪದಾರ್ಥಗಳು...
  • ಕಡಲೆ ಬೇಳೆ- 1 ಬಟ್ಟಲು
  • ನೀರು - 3 ಬಟ್ಟಲು
  • ಬೆಲ್ಲ- 1 ಬಟ್ಟಲು
  • 4- ಲವಂಗ 
  • ತುಪ್ಪ- 2 ಚಮಚ
  • ದ್ರಾಕ್ಷಿ, ಗೋಡಂಬಿ- ಸ್ವಲ್ಪ
  • ಏಲಕ್ಕಿ ಪುಡಿ - ಮುಕ್ಕಾಲು ಚಮಚ
  • ಕೊಬ್ಬರಿ ಪುಡಿ - ಅರ್ಧ ಬಟ್ಟಲು
ಮಾಡುವ ವಿಧಾನ...
  • ಮೊದಲಿಗೆ ಕುಕ್ಕರ್ ತೆಗೆದುಕೊಂಡು ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು, ಮೂರು ಬಟ್ಟಲು ನೀರು ಹಾಕಿ 3-5 ಕೂಗು ಕೂಗಿಸಿಕೊಳ್ಳಿ. 
  • ನಂತರ ಬೆಂದ ಕಡಲೆಬೇಳೆಯಿಂದ ನೀರನ್ನು ಬಸಿದಿಟ್ಟುಕೊಳ್ಳಿ.
  • ಬಳಿಕ ಒಲೆಯ ಮೇಲೆ ಬಾಣಲೆಯಿಟ್ಟು, ಅದಕ್ಕೆ ಬೆಂದ ಕಡಲೆಬೇಳೆ, ಬೆಲ್ಲ ಹಾಗೂ ಲವಂಗವನ್ನು ಹಾಕಿ. ಬೆಲ್ಲ ಕರಗುವವರೆಗೂ ಕೈಯಾಡಿಸಿ. ಮಿಶ್ರಣ ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಬೇಕು. 
  • ನಂತರ ಚಿಕ್ಕ ಪ್ಯಾನ್'ಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು ಇದನ್ನು ಬೆಲ್ಲ ಮಿಶ್ರಿತ ಕಡಲೆಬೇಳೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಬಳಿಕ ಏಲಕ್ಕಿ ಪುಡಿ ಹಾಗೂ ಕೊಬ್ಬರಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಉಡುಪಿ ಶೈಲಿಯ ಹಯಗ್ರೀವ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com