ಫಿಲ್ಟರ್ ಕಾಫಿ

ರುಚಿಕರವಾದ ಫಿಲ್ಟರ್ ಕಾಫಿ ಮಾಡುವ ವಿಧಾನ...
ಫಿಲ್ಟರ್ ಕಾಫಿ
ಫಿಲ್ಟರ್ ಕಾಫಿ
ಕಾಫಿಯನ್ನು ದಕ್ಷಿಣ ಭಾರತೀಯರು ಹೆಚ್ಚು ಬಳಕೆ ಮಾಡುತ್ತಾರೆ. ಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿದ್ದು, ಪದ್ಧತಿಗಳಿವೆ. ಆ ವಿಧಾನ ಹಾಗೂ ಪದ್ಧತಿಗಳನ್ನು ಅನುಸರಿಸಿದಾಗ ಮಾತ್ರ ರುಚಿಕರವಾದ, ಮನಸ್ಸಿಗೆ ಮುದ ನೀಡುವಂತಹ ಕಾಫಿಯನ್ನು ತಯಾರಿಸಬಹುದು. 
ಕಾಫಿಯನ್ನು ಹಲವಾರಿ ರೀತಿಗಳಲ್ಲಿ ತಯಾರಿಸುತ್ತಾರೆ. ಆದರೂ, ಬಹುತೇಕ ಮಂದಿ ಫಿಲ್ಟರ್ ಕಾಫಿಯನ್ನು ಇಷ್ಟಪಡುವುದುಂಟು. ಹಾಗಾದರೆ ಫಿಲ್ಟರ್ ಕಾಫಿ ಮಾಡುವ ವಿಧಾನ ಹೇಗೆ...? ಫಿಲ್ಟರ್ ಕಾಫಿ ತಯಾರಿಸುವ ವಿಧಾನವನ್ನು ಈ ಕೆಳಕಂಡಂತೆ ವಿವರಿಸಲಾಗಿದೆ. 
ಬೇಕಾಗುವ ಪದಾರ್ಥಗಳು...
  • ಕಾಫಿ ಫಿಲ್ಟರ್ - 1 (ಪಾತ್ರ ಅಂಗಡಿಗಳಲ್ಲಿ ದೊರೆಯುತ್ತದೆ)
  • ಹಾಲು- 1 ಲೋಟ
  • ಕಾಫಿ ಪುಡಿ- 20 ಗ್ರಾಂ
  • ಸಕ್ಕರೆ - 1-2 ಚಮಚ
  • ಬಿಸಿ ನೀರು- ಸ್ವಲ್ಪ
ಮಾಡುವ ವಿಧಾನ...
  • ಮೊದಲಿಗೆ ಫಿಲ್ಟರ್'ನ್ನು ಚೆನ್ನಾಗಿ ತೊಳೆಯಬೇಕು. ನೀರನ್ನು ಬಿಸಿ ಮಾಡಿ ಆ ಬಿಸಿ ನೀರಿಗೆ ಫಿಲ್ಟರ್'ನ ಮೇಲ್ಭಾಗದ ಜಾರ್'ನ್ನು ಇಡಬೇಕು. ಈ ಜಾರ್ ಒಳಗೇ ರಂಧ್ರಗಳಿರುವ ಒತ್ತಡದ ಜಾಲರಿ ಕೂಡ ಇರುತ್ತದೆ. ಜಾರ್ ಜೊತೆ ಜೊತೆಗೆ ಇದನ್ನೂ ಬಿಸಿ ನೀರಿನಲ್ಲಿ ಹಾಕಬೇಕು. 
  • ನೀರು ಕುದಿಯುತ್ತಿರುವಾಗ ಫಿಲ್ಟರ್ ತೆಗೆದು, ಫಿಲ್ಟರ್ ಜೊತೆಗೆ ಕೆಳಭಾಗದಲ್ಲಿ ನೀಡಲಾಗಿರುವ ಪಾತ್ರೆ ಮೇಲಿಡಬೇಕು. ನಂತರ ಬಿಸಿಯಾಗಿರುವ ಫಿಲ್ಟರ್ ಜಾರ್'ಗೆ ಕಾಫಿ ಪುಡಿಯನ್ನು ಹಾಕಿ, ಬಿಸಿ ನೀರನ್ನು ಹಾಕಬೇಕು. 
  • ಕಾಫಿಯ ಪರಿಮಳ ಹಾಳಾಗದಂತೆ ನೋಡಿಕೊಳ್ಳಲು ಭದ್ರವಾಗಿ ಗಾಳಿಯಾಡದಂತೆ ಮುಚ್ಚಳ ಮುಚ್ಚಿ. 
  • ಹಾಲನ್ನು ಚೆನ್ನಾಗಿ ಕಾಯಿಸಿಕೊಳ್ಳಬೇಕು. ಡಿಕಾಕ್ಷನ್ ಸೋರಲು 10-15 ನಿಮಿಷಗಳ ಕಾಲ ಬೇಕಾಗುತ್ತದೆ. 
  • ಡಿಕಾಕ್ಷನ್ ಸೋರಿದ ಬಳಿಕ ನಮಗೆ ಬೇಕಿದ್ದ ರೀತಿಯಲ್ಲಿ ಕಾಫಿಯನ್ನು ತಯಾರಿಸಿಕೊಳ್ಳಬಹುದು. ಲೈಟ್, ಸ್ಟ್ರಾಂಗ್, ಎಕ್ಸ್ಟ್ರಾ ಸ್ಟ್ರಾಗ್ ಕಾಫಿ ಮಾಡಿಕೊಳ್ಳಬಹುದು. 
  • ನಿಮಗೆ ಬೇಕಿದ್ದಷ್ಟು ಡಿಕಾಕ್ಷನ್'ನನ್ನು ಲೋಟಕ್ಕೆ ಹಾಕಿಕೊಂಡು ಅದಕ್ಕೆ ಹಾಲು ಹಾಗೂ ಸಕ್ಕರೆ ಹಾಕಿದರೆ ರುಚಿಕರವಾದ ಫಿಲ್ಟರ್ ಕಾಫಿ ಸಿದ್ಧವಾಗುತ್ತದೆ. 
ವಿಶೇಷ ಸೂಚನೆ: ಒಮ್ಮೆ ಮಾಡಿದ ಕಾಫಿಯನ್ನು ಮತ್ತೆ ಬಿಸಿ ಮಾಡಬಾರದು. ಇದರಿಂದ ಕಾಫಿಯ ರುಚಿ ಹಾಳಾಗುತ್ತದೆ. ಒಮ್ಣೆ ಬಳಿಸಿದ ಕಾಫಿ ಪೌಡರ್ ನ್ನು ಮತ್ತೊಮ್ಮೆ ಬಳಸಬಾರದು. ಫಿಲ್ಟರ್ ನಲ್ಲಿರುವ ಹಳೆ ಪೌಡರ್ ಮೇಲೆ ಕೂಡ ಮತ್ತೊಮ್ಮೆ ಹೊಸ ಪೌಡರ್ ಹಾಗಿ ಡಿಕಾಕ್ಷನ್ ತಯಾರಿಸಿದರೂ, ಕಾಫಿ ರುಚಿ ಹಾಳಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com