ತರಕಾರಿ ಸೂಪ್

ರುಚಿಕರ ಹಾಗೂ ಆರೋಗ್ಯಕರವಾದ ತರಕಾರಿ ಸೂಪ್ ಮಾಡುವ ವಿಧಾನ...
ತರಕಾರಿ ಸೂಪ್
ತರಕಾರಿ ಸೂಪ್

ಬೇಕಾಗುವ ಪದಾರ್ಥಗಳು

  • ಬೆಳ್ಳುಳ್ಳಿ- 3 ಸಣ್ಣಗೆ ಹೆಚ್ಚಿಕೊಂಡಿದ್ದು,
  • ಶುಂಠಿ- ಸ್ವಲ್ಪ, ಸಣ್ಣಗೆ ಹೆಚ್ಚಿಕೊಂಡಿದ್ದು,
  • ಸ್ಪ್ರಿಂಗ್ ಆನಿಯನ್ (ಹಸಿರು ಈರುಳ್ಳಿ)- ಸಣ್ಣಗೆ ಹೆಚ್ಚಿಕೊಂಡಿದ್ದು ಸ್ವಲ್ಪ
  • ಎಣ್ಣೆ- ಸ್ವಲ್ಪ
  • ಕ್ಯಾರೆಟ್- ಸಣ್ಣಗೆ ಹೆಚ್ಚಿಕೊಂಡಿದ್ದು ಸ್ವಲ್ಪ
  • ಬೀನ್ಸ್- ಸಣ್ಣಗೆ ಹೆಚ್ಚಿಕೊಂಡಿದ್ದು ಸ್ವಲ್ಪ
  • ಕ್ಯಾಪ್ಸಿಕಂ- ಸಣ್ಣಗೆ ಹೆಚ್ಚಿಕೊಂಡಿದ್ದು ಸ್ವಲ್ಪ
  • ಎಲೆಕೋಸು- ಸಣ್ಣಗೆ ಹೆಚ್ಚಿಕೊಂಡಿದ್ದು ಸ್ವಲ್ಪ
  • ಬಟಾಣಿ- ಸ್ವಲ್ಪ
  • ಸ್ವೀಟ್ ಕಾರ್ನ್- ಸ್ವಲ್ಪ
  • ನೀರು- 4 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಕಾರ್ನ್ ಫ್ಲೋರ್- ಮುಕ್ಕಾಲು ಚಮಚ
  • ವಿನೇಗರ್- ಅರ್ಧ ಚಮಚ
  • ಮಿಕ್ಸ್ಡ್ ಹರ್ಬ್ಸ್- ಅರ್ಧ ಚಮಚ
  • ಕಾಳು ಮೆಣಸಿನ ಪುಡಿ- ಅರ್ಧ ಚಮಚ
  • ಒಣಗಿದ ಮೆಣಸಿನ ಪದರದ ಪುಡಿ- ಅರ್ಧ ಚಮಚ

ಮಾಡುವ ವಿಧಾನ...

  • ಮೊದಲಿಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಸ್ಪ್ರಿಂಗ್ ಆನಿಯನ್, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಹುರಿದುಕೊಳ್ಲಬೇಕು. 
  • ಬಳಿಕ ಎಲೋಕೋಸು, ಬಟಾಣಿ, ಸ್ವೀಟ್ ಕಾರ್ನ್ ಹಾಗೂ 4 ಬಟ್ಟಲು ನೀರು ಹಾಕಿ 5-6 ನಿಮಿಷ ಬೇಯಲು ಬಿಡಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರಿನಲ್ಲಿ ಕಲಸಿಕೊಂಡ ಕಾರ್ನ್ ಫ್ಲೋರ್ ಹಾಕಿ ಸೂಪ್ ಗಟ್ಟಿಯಾಗುವವರೆಗೂ ಕುದಿಯಲು ಬಿಡಿ. 
  • ಕೊನೆಯದಾಗಿ ವಿನೇಗರ್, ಮಿಕ್ಸ್ಡ್ ಹರ್ಬ್ಸ್, ಕಾಳುಮೆಣಸಿನ ಪುಡಿ, ಒಣಗಿದ ಮೆಣಸಿನ ಪದರದ ಪುಡಿ ಹಾಕಿ 2 ನಿಮಿಷ ಕುದಿಯಲು ಬಿಟ್ಟರೆ, ರುಚಿಕರ ಹಾಗೂ ಆರೋಗ್ಯಕರವಾದ ತರಕಾರಿ ಸೂಪ್ ಕುಡಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com