ಚಿಲ್ಲಿ ಇಡ್ಲಿ

ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಚಿಲ್ಲಿ ಇಡ್ಲಿ ಮಾಡುವ ವಿಧಾನ...
ಚಿಲ್ಲಿ ಇಡ್ಲಿ
ಚಿಲ್ಲಿ ಇಡ್ಲಿ

ಬೇಕಾಗುವ ಪದಾರ್ಥಗಳು

  • ಇಡ್ಲಿ - 4-5
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
  • ಶುಂಠಿ, ಬೆಳ್ಳುಳ್ಳು- ಸಣ್ಣಗೆ ಹೆಚ್ಚಿದ್ದು 1 ಚಮಚ
  • ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 1 ಚಮಚ
  • ಈರುಳ್ಳಿ- ಮಧ್ಯಮ ಗಾತ್ರಕ್ಕೆ ಕತ್ತರಿಸಿದ್ದು 1 ಬಟ್ಟಲು
  • ಕ್ಯಾಪ್ಸಿಕಂ- 2-3 ಮೂರು
  • ಸೋಯಾ ಸಾಸ್- 1 ಚಮಚ
  • ಚಿಲ್ಲಿ ಸಾಸ್- 2 ಚಮಚ
  • ಟೊಮೆಟೋ ಕೆಟ್ಚಪ್ - 3 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಕಾಳು ಮೆಣಸಿನ ಪುಡಿ- ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ...

  • ಮೊದಲು ಇಡ್ಲಿಗಳನ್ನು ಕತ್ತರಿಸಿಕೊಳ್ಳಬೇಕು. ನಂತರ ಬಾಣಲೆಗೆ ಎಣ್ಣೆಹಾಕಿ. ಕಾದ ಎಣ್ಣೆಗೆ ಕತ್ತರಿಸಿಕೊಂಡಿದ್ದ ಇಡ್ಲಿಗಳನ್ನು ಹಾಕಿ ಚೆನ್ನಾಗಿ ಚಿನ್ನದ ಬಣ್ಣ ಬರುವವರೆಗೂ ಕರಿದುಕೊಳ್ಳಬೇಕು. 
  • ಬಾಣಲೆಗೆ 3-2 ಚಮಚ ಎಣ್ಣೆ ಹಾಕಿ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹುರಿದುಕೊಳ್ಳಬೇಕು. ನಂತರ ಈರುಳ್ಳಿ. ಕ್ಯಾಪ್ಸಿಕಂ ಹಾಕಿ ಕೆಂಪಗೆ ಹುರಿದು ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೋ ಕೆಟ್ಚಪ್ ಹಾಕಿ 3-5 ನಿಮಿಷ ಬೇಯಲು ಬಿಡಬೇಕು. 
  • ಬಳಿಕ ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಈಗಾಗಲೇ ಎಣ್ಣೆಯಲ್ಲಿ ಕರಿದಿಟ್ಟುಕೊಂಡ ಇಡ್ಲಿ ಪೀಸ್ ಗಳನ್ನು ಹಾಕಿ ಮಿಶ್ರಣ ಮಾಡಿ, ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ, ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಚಿಲ್ಲಿ ಇಡ್ಲಿ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com