ರಾಗಿ ಲಾಡೂ

ರುಚಿಕರ, ಆರೋಗ್ಯಕರ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ರಾಗಿ ಲಾಡೂ ಮಾಡುವ ವಿಧಾನ...
ರಾಗಿ ಲಾಡೂ
ರಾಗಿ ಲಾಡೂ

ಬೇಕಾಗುವ ಪದಾರ್ಥಗಳು

  • ರಾಗಿ ಹಿಟ್ಟು- 1 ಬಟ್ಟಲು
  • ದ್ರಾಕ್ಷಿ, ಗೋಡಂಬಿ- ಸ್ವಲ್ಪ
  • ನೀರು- 1/2 ಬಟ್ಟಲು
  • ಬೆಲ್ಲ- 150 ಗ್ರಾಂ
  • ಏಲಕ್ಕಿ ಪುಡಿ- ಸ್ವಲ್ಪ
  • ತುಪ್ಪು-ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು, ಸ್ವಲ್ಪ ತುಪ್ಪ ಹಾಕಿ ರಾಗಿ ಹಿಟ್ಟನ್ನು ಕೆಂಪಗೆ ಹುರಿದಿಟ್ಟುಕೊಳ್ಳಬೇಕು. 
  • ಮತ್ತೊಂದು ಪ್ಯಾನ್'ಗೆ ತುಪ್ಪ ಹಾಕಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಬೇಕು. 
  • ಪಾತ್ರೆಯೊಂದನ್ನು ಒಲೆಯ ಮೇಲಿಟ್ಟು ನೀರು ಹಾಕಿ ಬೆಲ್ಲವನ್ನು ಕರಗಿಸಿಕೊಳ್ಳಬೇಕು. ಬೆಲ್ಲ ಕರಗಿದ ಬಳಿಕ ಪಾಕ ತಣ್ಣಗಾಗಲು ಬಿಡಬೇಕು. 
  • ಹುರಿದ ರಾಗಿ ಹಿಟ್ಟಿಗೆ ಏಲಕ್ಕಿ ಪುಡಿ, ದ್ರಾಕ್ಷಿ ಹಾಗೂ ಗೋಡಂಬಿ ಉಳಿದ ತುಪ್ಪ ಹಾಕಿ ಮಿಶ್ರಣ ಮಾಡಿಕೊಂಡು, ಪಾಕವನ್ನು ಹಾಕುತ್ತಾ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಉಂಡೆ ಕಟ್ಟಿದರೆ ರುಚಿಕರ ಹಾಗೂ ಆರೋಗ್ಯಕರವಾದ ರಾಗಿ ಲಾಡೂ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com