ಬೆಂಡೆಕಾಯಿ ಕುರ್ಕುರೆ

ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬೆಂಡೆಕಾಯಿ ಕುರ್ಕುರೆ ಮಾಡುವ ವಿಧಾನ...
ಬೆಂಡೆಕಾಯಿ ಕುರ್ಕುರೆ
ಬೆಂಡೆಕಾಯಿ ಕುರ್ಕುರೆ

ಬೇಕಾಗುವ ಪದಾರ್ಥಗಳು

  • ಬೆಂಡೆಕಾಯಿ- ಅರ್ಧ ಕೆಜಿ
  • ಅಚ್ಛ ಖಾರದ ಪುಡಿ- ಅರ್ಧ ಚಮಚ
  • ಅರಿಶಿಣ ಪುಡಿ- ಅರ್ಧ ಚಮಚ
  • ದನಿಯಾ ಪುಡಿ - ಅರ್ಧ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಜೀರಿಗೆ ಪುಡಿ- ಕಾಲು ಚಮಚ
  • ಚಾಟ್ ಮಸಾಲಾ- ಅರ್ಧ ಚಮಚ
  • ನಿಂಬೆ ರಸ- ಸ್ವಲ್ಪ
  • ಕಡಲೆಹಿಟ್ಟು- 1/4 ಬಟ್ಟಲು
  • ಅಕ್ಕಿ ಹಿಟ್ಟು-  1/4 ಬಟ್ಟಲು
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಮೊದಲು ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಮಧ್ಯೆ ಕತ್ತರಿಸಿ ಬೀಜ ತೆಗೆದು ಒಂದು ಬೆಂಡೆಕಾಯಿಯನ್ನು ನಾಲ್ಕು ಭಾಗ ಮಾಡಿಟ್ಟುಕೊಳ್ಳಬೇಕು.
  • ನಂತರ ಕತ್ತರಿಸಿಕೊಂಡ ಬೆಂಡೆಕಾಯಿಗೆ ಅಚ್ಛ ಖಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಚಮಚ ಎಣ್ಣೆ, ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ನೆನೆಯಲು ಬಿಡಬೇಕು. 
  • ನಂತರ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಹಾಗೂ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಎಣ್ಣೆಯಲ್ಲಿ ಕೆಂಪಗೆ ಕರಿದರೆ ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬೆಂಡೆಕಾಯಿ ಕುರ್ಕುರೆ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com