ಗಸಗಸೆ ಪಾಯಸ

ರುಚಿಕರವಾದ ಗಸಗಸೆ ಪಾಯಸ ಮಾಡುವ ವಿಧಾನ...
ಗಸಗಸೆ ಪಾಯಸ
ಗಸಗಸೆ ಪಾಯಸ

ಬೇಕಾಗುವ ಪದಾರ್ಥಗಳು...

  • ಗಸಗಸೆ – 6 ಚಮಚ
  • ಅಕ್ಕಿ – 3 ಚಮಚ
  • ಹಸಿ ಕೊಬ್ಬರಿ ತುರಿ – ಸ್ವಲ್ಪ
  • ಏಲಕ್ಕಿ – 2
  • ಲವಂಗ – 2
  • ಬಾದಾಮಿ – 2
  • ಗೋಡಂಬಿ – 6
  • ಒಣದ್ರಾಕ್ಶಿ – 10
  • ಬೆಲ್ಲದ ಪುಡಿ –  6-8 ಚಮಚ
  • ಕಾಯಿಸಿದ ಹಾಲು – 1 ಲೋಟ
  • ಕೇಸರಿ ದಳಗಳು – 2-3
  • ತುಪ್ಪ – 3 ಚಮಚ

ಮಾಡುವ ವಿಧಾನ...

  • ಮೊದಲಿಗೆ ಬಾಣಲಿಯಲ್ಲಿ ಗಸಗಸೆ ಹುರಿದು ತೆಗೆದಿಟ್ಟುಕೊಳ್ಳಬೇಕು. ಅಕ್ಕಿ ಹುರಿದುಕೊಂಡು, ನಂತರ ಅದು ಆರಿದ ಮೇಲೆ ಇವೆರಡನ್ನೂ ಸೇರಿಸಿ 2 ಗಂಟೆಗಳ ಕಾಲ ಸ್ವಲ್ಪ ಹಾಲಿನಲ್ಲಿ ನೆನೆ ಹಾಕಬೇಕು. ಕಾಯಿಸಿದ ಹಾಲಿನಲ್ಲಿ ಕೇಸರಿ ದಳ ನೆನೆ ಹಾಕಬೇಕು.
  • ಹಸಿ ಕೊಬ್ಬರಿ ತುರಿ, ಅಕ್ಕಿ ಮತ್ತು ಗಸಗಸೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಇದಕ್ಕೆ ಸ್ವಲ್ಪ ನೀರು ಸೇರಿಸಿ ತೊಳೆದು ಒಂದು ಪಾತ್ರೆಗೆ ಹಾಕಿಕೊಂಡು ಒಂದು ಕುದಿ ಕುದಿಸಬೇಕು. 
  • ನಂತರ ಕೇಸರಿ ದಳ, ಹಾಲು ಮತ್ತು ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಕುದಿಸಿಬೇಕು ಜೊತೆಗೆ ಏಲಕ್ಕಿ. ಲವಂಗ ಪುಡಿ ಮಾಡಿ ಹಾಕಬೇಕು. 
  • ಬಳಿ ತುಪ್ಪದಲ್ಲಿ ಗೋಡಂಬಿ, ಬಾದಾಮಿ ಚೂರುಗಳು ಮತ್ತು ಒಣ ದ್ರಾಕ್ಶಿ ಸ್ವಲ್ಪ ಹುರಿದು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಗಸಗಸೆ ಪಾಯಸ ಸವಿಯಲು ಸಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com