ಅರಿಶಿನ ತಂಬುಳಿ

ರುಚಿಕರ ಹಾಗೂ ಆರೋಗ್ಯಕರವಾದ ಅರಿಶಿನ ತಂಬುಳಿ ಮಾಡುವ ವಿಧಾನ...

Published: 16th April 2021 11:46 AM  |   Last Updated: 16th April 2021 11:46 AM   |  A+A-


turmeric Tambuli

ಅರಿಶಿನ ತಂಬುಳಿ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು...

 • ಹಸಿ ಅರಿಶಿನ ಕೊಂಬು: 1/2 ಇಂಚು 
 • ತೆಂಗಿನ ತುರಿ: 1 ಬಟ್ಟಲು
 • ಬೆಲ್ಲ: 3-4 ಚಮಚ 
 • ಮಜ್ಜಿಗೆ ಅಥವಾ ಮೊಸರು: 1/2 ಬಟ್ಟಲು
 • ಎಣ್ಣೆ: 1 ಚಮಚ 
 • ಸಾಸಿವೆ 1/2 ಚಮಚ 
 • ಒಣ ಮೆಣಸಿನಕಾಯಿ: 1/2 
 • ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

 • ಅರಿಶಿನ ಕೊಂಬನ್ನು ಚೆನ್ನಾಗಿ ತೊಳೆದು ತೆಳ್ಳಗೆ ಸ್ಲೈಸ್ ಮಾಡಿಕೊಳ್ಳಿ. ತೆಂಗಿನ ತುರಿಗೆ ಹೆಚ್ಚಿದ ಅರಿಶಿನ ಸೇರಿಸಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ. ಅದಕ್ಕೆ ಮಜ್ಜಿಗೆ ಹಾಕಿಟ್ಟುಕೊಳ್ಳಬೇಕು.
 • ಮೊಸರು ಹಾಕುವುದಾದರೆ ಸೌಟಿನಿಂದ ಗಂಟಿಲ್ಲದಂತೆ ಕಲಕಿ ಹಾಕಿ, ಅರ್ಧ ಬಟ್ಟಲು ನೀರು, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 
 • ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಒಣ ಮೆಣಸಿನಕಾಯಿ, ಸಾಸಿವೆ ಹಾಕಿ ಕೆಂಪಗೆ ಮಾಡಿಕೊಂಡು ಯಂಬುಳಿಗೆ ಹಾಕಿದರೆ, ರುಚಿಕರ ಹಾಗೂ ಆರೋಗ್ಯಕರವಾದ ಅರಿಶಿನ ತಂಬುಳಿ ಸವಿಯಲು ಸಿದ್ಧ.
Stay up to date on all the latest ಆಹಾರ-ವಿಹಾರ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp