ಬಾದಾಮ್ ಪುರಿ

ರುಚಿಕರವಾದ ಬಾದಾಮ್ ಪುರಿ ಮಾಡುವ ವಿಧಾನ...
ಬಾದಾಮ್ ಪುರಿ
ಬಾದಾಮ್ ಪುರಿ

ಬೇಕಾಗುವ ಪದಾರ್ಥಗಳು

  • ಮೈದಾಹಿಟ್ಟು- 1 ಬಟ್ಟಲು
  • ಅಡುಗೆ ಸೋಡಾ- ಚಿಟಿಕೆಯಷ್ಟು
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಸಕ್ಕರೆ- ಒಂದೂವರೆ ಬಟ್ಟಲು

ಮಾಡುವ ವಿಧಾನ...

  • ಮೊದಲಿಗೆ ಮೈದಾಹಿಟ್ಟಿಗೆ ಸ್ವಲ್ಪ ಸೋಡಾ ಹಾಕಿ ಮಿಶ್ರಣ ಮಾಡಬೇಕು. ನಂತರ 5-6 ಚಮಚ ಎಣ್ಣೆಯನ್ನು ಬಿಸಿ ಮಾಡಿ ಹಾಕಿ ಮಿಶ್ರಣ ಮಾಡಿ, ನಂತರ ಸ್ವಲ್ಪ ನೀರು ಹಾಕಿ ಹಿಟ್ಟನ್ನು ತಯಾರು ಮಾಡಿಕೊಂಡು 15-20 ನಿಮಿಷ ನೆನೆಯಲು ಬಿಡಬೇಕು
  • ನಂತರ ಪಾತ್ರೆಯೊಂದಕ್ಕೆ ಸಕ್ಕರೆ ಹಾಗೂ 1 ಬಟ್ಟಲು ನೀರು ಹಾಕಿ ಒಂದೆಳೆ ಪಾಕ ತಯಾರು ಮಾಡಿಕೊಳ್ಳಿ.
  • ನಂತರ ಹಿಟ್ಟನ್ನು ಬಾದಾಮ್ ಪುರಿ ಆಕಾರಕ್ಕೆ ಒತ್ತಿಕೊಳ್ಳಿ. ಬಳಿಕೆ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಪುರಿಗಳನ್ನು ಹಾಕಿ ಸಣ್ಣ ಉರಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿದುಕೊಳ್ಳಿ.
  • ಪಾಕ ಬೆಚ್ಚಗಿರುವಾಗಲೇ ಅದರೊಳಗೆ ಕರಿದುಕೊಂಡ ಪುರಿಗಳನ್ನು ಹಾಕಿ. 2-4 ನಿಮಿಷ ನೆಂದ ಬಳಿಕ ತೆಗೆದು ಡ್ರೈಫ್ರೂಟ್ಸ್ ನೊಂದಿಗೆ ಅಲಂಕರಿಸಿದರೆ ರುಚಿಕರವಾದ ಬಾದಾಮ್ ಪುರಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com